ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕುಡಿಯುವ ನೀರಾಗಿ ಹರಿಯುತ್ತದೆ ವರಾಹಿ ಮಾಣಿ ಡ್ಯಾಮ್ ನ ಹಿನ್ನೀರು

 ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕುಡಿಯುವ ನೀರಾಗಿ ಹರಿಯುತ್ತದೆ ವರಾಹಿ ಮಾಣಿ  ಡ್ಯಾಮ್ ನ ಹಿನ್ನೀರು

ಪ್ರಬುದ್ಧವಾಣಿ ಪತ್ರಿಕೆಯು ಇತ್ತೀಚಿಗೆ ಉಡುಪಿ ಮಣಿಪಾಲ್ ಕಾಪು ಹೆಬ್ರಿ ಕಾರ್ಕಳ ಬೈಂದೂರು ತಾಲೂಕುಗಳಲ್ಲಿ ಸಂಚರಿಸಿ ಸಂಗ್ರಹಿಸಿದ ಮಾಹಿತಿಯಂತೆ ಕರಾವಳಿಯ ಎಲ್ಲಾ ತಾಲೂಕುಗಳಿಗೆ ಕುಡಿಯುವ ನೀರಿಗೆ ವರಾಹಿ ನದಿಯ ಅಣೆಕಟ್ಟಿನ ಹಿನ್ನೀರನ್ನು ಬಳಸಿಕೊಳ್ಳಲಾಗುತ್ತಿದೆ. ಒಂದು ಅಣೆಕಟ್ಟು ಅನೇಕ ಉಪಯೋಗಗಳಿಗೆ ಕಾರಣವಾಗುತ್ತದೆ. ವಾರಾಹಿ ನದಿಗೆ ಕಟ್ಟಿದ ಅಣೆಕಟ್ಟಿನಲ್ಲಿ ವಿದ್ಯುತ್ ಉತ್ಪಾದನೆ ಒಂದೇ ಗುರಿಯಾಗಿತ್ತು.



ಗೂಗಲ್ ಕೃಪೆ 


೧೯೭೦ರ ಕಾಲಘಟ್ಟದಲ್ಲಿ ಅಣೆಕಟ್ಟು ಕಟ್ಟುವಾಗ ಜನರಿಗೆ ತಿಳಿಸಿದ ಮಾಹಿತಿ. ಆದರೆ ಈಗ ಅದೇ ಅಣೆಕಟ್ಟು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಾವರಿಯ ಚಾನೆಲ್ ಗಳ ಮೂಲಕ ಎಲ್ಲಾ ಹಳ್ಳಿ ಹಳ್ಳಿಗಳಲ್ಲೂ ಹರಿಯುತ್ತಿದೆ. ಈ ಚಾನಲ್ ಗಳಲ್ಲಿ ನೀರು ಹರಿದಿದ್ದಕ್ಕಿಂತ ಯೋಜನೆಯ ಹೆಸರಿನಲ್ಲಿ ಹಣಹರಿದು ಹೋಗಿದೇ ಹೆಚ್ಚು. ಕೋಟಿ ಕೋಟಿ ಹಣ ಯೋಜನೆಯ ಹೆಸರಿನಲ್ಲಿ ಕಳೆದ  ೩೦ ವರ್ಷಗಳಿಂದ ಹರಿದು ಹೋಗುತ್ತದೆ. ನೀರಾವರಿ ಯಿಂದ ಅನುಕೂಲವಾದ ಅಂಶಗಳೇನು ಕಾಣಿಸುತ್ತಿಲ್ಲ. ಆದ್ರೂ ಚಾನೆಲ್ ಗಳು ಈಗಲೂ ಕಾಮಗಾರಿ ನಡೆಯುತ್ತದೆ. ಈ ನಡುವೆ ಮನೆ ಮನೆ ಗಂಗೆ ಜಲ್ ಜೀವನ್ ಮಿಷನ್ ಯೋಜನೆಯಲ್ಲಿ ಕರಾವಳಿ ಆದ್ಯಂತ ಹಳ್ಳಿ ಹಳ್ಳಿಗಳಲ್ಲಿ ಟ್ಯಾಂಕ್ ಗಳ ನಿರ್ಮಾಣ ಮಾಡಿದ್ದು, ಆ ಟ್ಯಾಂಕುಗಳಿಗೆ ನೀರು ಪೂರೈಕೆ ಮಾಡಲು ವರಾಹಿ ಡ್ಯಾಂ ನ ಹಿನ್ನಿರನ್ನು ಬಳಸಿಕೊಳ್ಳಲಾಗುತ್ತಿದೆ.

ವರಾಹಿ ನದಿಯ ಮಲೆನಾಡಿನಲ್ಲಿ ಹುಟ್ಟಿ  ಪಶ್ಚಿಮಾಭಿಮುಖವಾಗಿ ಹರಿಯುತ್ತಾ ಹೊಸಂಗಡಿ ಸಮೀಪ ಕರಾವಳಿ ಯನ್ನು ಪ್ರವೇಶಿಸುತ್ತದೆ. ಈ ನದಿಗೆ ೧೯೭೦ರ ದಶಕದಲ್ಲಿ ಅಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದನೆ- ಯನ್ನು ಮಾಡುವ ಯೋಜನೆಯನ್ನು ರೂಪಿಸಲಾಯಿತು. ಅಂತೆಯೇ ಯೋಜನೆ ಪೂರ್ಣಗೊಂಡು ಹೊಸಂಗಡಿಯಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿದೆ. ವಿದ್ಯುತ್ ಉತ್ಪಾದನೆ -ಯಾದ ನಂತರದಲ್ಲಿ ಆ ನೀರನ್ನು ಮತ್ತೆ ನದಿಗೆ ಬಿಡಲಾಗುತ್ತಿದೆ ಕರಾವಳಿಯಲ್ಲಿ ವರಾಯಿ ನದಿಯನ್ನು ಹಾಲಾಡಿ ಹೊಳೆಯೆನ್ನುತ್ತಾರೆ. ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಪಶ್ಚಿಮಾಭಿಮುಖವಾಗಿ ಹರಿಯುವ ಎಲ್ಲಾ ನದಿಗಳು ಸಮುದ್ರಮಟ್ಟದಲ್ಲಿದ್ದು ಹಾಲಾಡಿ ಹೊಳೆ ಸ್ವಲ್ಪ ಎತ್ತರದಲ್ಲಿ ಹರಿಯುತ್ತದೆ. ಹೆಬ್ರಿ ಕಡೆಯಿಂದ ಬರುವ ಶೀತಾ ನದಿ ಕೊಲ್ಲೂರು ಸಮೀಪದಿಂದ ಬರುವ ಸೌಪರ್ಣಿಕಾ ನದಿ

ಚಕ್ರಾನದಿ ವಾರಾಹಿ ನದಿ ಎಲ್ಲರೂ ಒಂದಾಗಿಯೇ  ಸಮುದ್ರವನ್ನು ಸೇರುತ್ತಾರೆ. ಸಮುದ್ರದ ಉಬ್ಬರ ಇಳಿತಕ್ಕೆ ಈ ನದಿಗಳಿಗೆ ಉಪ್ಪು ನೀರು ಸೇರಿಕೊಳ್ಳುತ್ತದೆ ಆದ್ದರಿಂದ ಎಲ್ಲ ನದಿಗಳ ನೀರು ಕುಡಿಯಲು ಯೋಗ್ಯವಾಗುವುದಿಲ್ಲ .ಈ ಎಲ್ಲಾ ನದಿಗಳ ಮಧ್ಯ ಹಾಲಾಡಿ ಹೊಳೆ ಎಂದು ಕರೆಯುವ ವರಾಯಿ ನದಿ ಪಶ್ಚಿಮ ಘಟ್ಟವನ್ನು ಇಳಿದ ಮೇಲೂ ಸಂಪೂರ್ಣ ಸಮುದ್ರ ಮಟ್ಟಕ್ಕೆ ಹೋಗದೆ ಎತ್ತರವನ್ನು ಕಾದುಕೊಂಡಿದ್ದರಿಂದ ಈ ನದಿಗೆ ಸಮುದ್ರದ ನೀರು, ನುಗ್ಗುವುದಿಲ್ಲ ಇದೇ ಕಾರಣಕ್ಕೆ ಈ ನದಿಯ ನೀರನ್ನು ಛಲ ಮಿಷನ್ ಯೋಜನೆ ಯಡಿ ಸಂಪೂರ್ಣ ಬಳಸಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ. ಪರಿಣಾಮವಾಗಿ ಹೊಸಂಗಡಿಯ ಸಮೀಪ ವಿದ್ಯುತ್ ಉತ್ಪಾದನೆ ಮಾಡಿದ ನೀರನ್ನು ಲಿಪ್ಟ್  ಇರಿಗೇಶನ್ ಮೂಲಕ  ತೆಗೆದುಕೊಂಡು ಶುದ್ಧೀಕರಿಸಿ ಹೆಬ್ರಿ, ಕಾರ್ಕಳ, ಉಡುಪಿ, ಬ್ರಹ್ಮಾವರ, ಬೈಂದೂರ್, ಕಾಪು ತಾಲೂಕುಗಳಿಗೆ ಕುಡಿಯುವ ನೀರನ್ನು ಪೂರೈಸಲು ಕಾಮಗಾರಿಗಳನ್ನು ಮಾಡಲಾಗುತ್ತದೆ.

ಒಂದು ಕಡೆ ಅಣೆಕಟ್ಟಿನಿಂದ ನಿರಾಶ್ರಿತರಾದ ಸಂತ್ರಸ್ತರು ಇಂದಿಗೂ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲಾಗದೆ ಹೋರಾಟ ಮಾಡುತ್ತಿದ್ದು ಇನ್ನೊಂದು ಕಡೆ ಅದೇ ಹಿನ್ನಿರು ಆರು  ತಾಲೂಕುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯಾಗುತ್ತಿದೆ ಎನ್ನುವುದು ಪ್ರಕೃತಿಯನ್ನು ಮನುಷ್ಯ ಹೇಗೆ ಬಳಸಿಕೊಳ್ಳುತ್ತಿದ್ದಾನೆ ಎನ್ನುವುದಕ್ಕೆ ಸಾಕ್ಷಿಯಾಗುತ್ತದೆ. 

Post a Comment

Previous Post Next Post