ಅರಣ್ಯ ಇಲಾಖೆಯ ಸ್ಥಳಗಳಲ್ಲಿ ಜಲ ಮಿಷನ್ ನೀರಿನ ಟ್ಯಾಂಕ್‌ಗಳು.ಸರ್ಕಾರಕ್ಕೊಂದು ನ್ಯಾಯ ಜನರಿಗೊಂದು ನ್ಯಾಯ. ಜನರ ಮನೆ ಜಮೀನುಗಳಿಗೆ ಹಕ್ಕುಗಳನ್ನು ನೀಡಬಹುದಲ್ಲವೇ.?
ಕೇಂದ್ರ ಸರ್ಕಾರದ ಮನೆಮನೆಗೂ ಗಂಗೆ ಜಲ ಮಿಷನ್ ಯೋಜನೆ ಯಡಿ ಪ್ರತಿ ಗ್ರಾಮ ಗ್ರಾಮಗಳಲ್ಲೂ ನೀರಿನ ಟ್ಯಾಂಕಗಳನ್ನು ತೀರ್ಮಾನ ಮಾಡಲಾಗಿದೆ. ಈ ನೀರಿನ ಟ್ಯಾಂಕುಗಳು ಆಯಾಯ ಊರಿನ ಜನರಿ ಗೋಸ್ಕರ ನಿರ್ಮಿಸಲಾಗುತ್ತಿದೆ. ಆದರೆ ಆಯಾಯ ಊರಿನಲ್ಲಿ ಕನಿಷ್ಠ ಅರ್ಧ ಕ್ಕಿಂತಲೂ ಹೆಚ್ಚು ಮನೆಗಳಿಗೆ ಹಕ್ಕುಪತ್ರಗಳೆ ಇಲ್ಲ. ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಲು ಗ್ರಾಮೀಣ ಕುಡಿಯುವ ನೀರಿನ ಮತ್ತು ನೈರ್ಮಲ್ಯ ಇಲಾಖೆ ಎಲ್ಲಿಯೂ ಅರಣ್ಯ ಇಲಾಖೆಯ ಅನುಮತಿಯನ್ನು ತೆಗೆದುಕೊಂಡಿಲ್ಲ. ಹೆಚ್ಚಿನ ಕಡೆ ಅರಣ್ಯ ಇಲಾಖೆಯ ಸ್ಥಳಗಳಲ್ಲಿ ನೀರಿನ ಟ್ಯಾಂಕ್ಗಳನ್ನು ನಿರ್ಮಾಣ ಮಾಡಲಾಗಿದೆ. ಈ ನೀರಿನ ಟ್ಯಾಂಕಗಳು ಅಲ್ಲಿರುವ ಜನರ ಅನುಕೂಲಕ್ಕಾಗಿ ನಮ್ಮ ತೆರಿಗೆಯಲ್ಲಿ ನಿರ್ಮಾಣ ಮಾಡುತ್ತಿರುವ ಸರ್ಕಾರದ ಯೋಜನೆಯಾಗಿದೆ.
ಇಲ್ಲಿ ಸರ್ಕಾರದ ಯೋಜನೆಗಳಿಗೆ ಯಾವುದೇ ಅನುಮತಿ ಅಗತ್ಯವಿಲ್ಲ ಎನ್ನುವುದಾದರೆ ಜನರಿಗೂ ಅನುಮತಿಯ ಅಗತ್ಯವಿಲ್ಲ. ಈಗಾಗಲೇ ಒಂದೊಂದು ಗ್ರಾಮದಲ್ಲಿ ಸಾವಿರ ಮನೆಗಳಿದ್ದರೆ ಅದರಲ್ಲಿ ೫೦೦ ರಿಂದ ೬೦೦ ಮನೆಗಳು ಅಕ್ರಮ ಕಟ್ಟಡಗಳಾಗಿವೆ. ಅದಕ್ಕೆ ಇದೇ ಸರ್ಕಾರ ಮೇಲ್ಮನೆ ಕಂದಾಯವನ್ನು ತೆಗೆದುಕೊಳ್ಳುತ್ತದೆ. ಭೂಮಿ ಹಕ್ಕನ್ನು ನೀಡಿಲ್ಲ ಇದಕ್ಕಾಗಿ ಜನ ಹೋರಾಟ ಮಾಡಿ ಸೋತು ಹೋಗಿದ್ದಾರೆ. ಅನೇಕ ಸಂಘಟನೆಗಳು ವರ್ಷಾನುಗಟ್ಟಲೆಯಿಂದ ಹೋರಾಟ ಮಾಡಿದರೂ ಸರ್ಕಾರ ಸಮಸ್ಯೆಯನ್ನು ಬಗೆಹರಿಸಿಲ್ಲ. ಹೀಗೆ ಇರುವ ಪ್ರಶ್ನೆ ಸರ್ಕಾರ ಯಾವ ಜನರಿಗಾಗಿ ಇದೆಯೋ ಆ ಜನರಿಗಾಗಿ ನೀರಿನ ಟ್ಯಾಂಕ್ಗಳನ್ನು ನಿರ್ಮಾಣ ಮಾಡುತ್ತಿರುವುದಕ್ಕೆ ಕಾನೂನು ಬದ್ಧವಾಗಿ ಇಲಾಖೆಯ ನಡುವೆ ಪತ್ರ ವ್ಯವಹಾರ ನಡೆದು ಅನುಮೋದನೆ ತೆಗೆದುಕೊಳ್ಳಬೇಕು. ಆದರೆ ಎಲ್ಲಿಯೂ ಈ ಕ್ರಮವನ್ನು ತೆಗೆದುಕೊಂಡಿಲ್ಲ . ಹಾಗಾದರೆ ಬಡವರಿಗೊಂದು ನ್ಯಾಯ ಸರಕಾರಕ್ಕೆ ಒಂದು ನ್ಯಾಯವೇ? ಯಾರು ಹಕ್ಕುಗಳಿಂದ ವಂಚಿತರಾಗಿದ್ದಾರೋ ಅವರಿಗೆ ನ್ಯಾಯ ಕೊಡಲು ವರ್ಷನೂಗಟ್ಟಲೆಯಿಂದ ಕಾಯುತ್ತಿದ್ದರೂ ನ್ಯಾಯ ಸಿಕ್ಕಿಲ್ಲ ಏಕೆ. ರಾಜಕಾರಣಿಗಳಿಗೆ ಕನಿಷ್ಠ ಜ್ಞಾನವಿದ್ದರೆ ಈ ಸಮಸ್ಯೆಯನ್ನು ಈಗಲಾದರೂ ಬಗೆಹರಿಸಬೇಕು. ಅರಣ್ಯ ಇಲಾಖೆ ಸರ್ಕಾರದ ಅವಿಭಾಜ್ಯ ಅಂಗ. ಚುನಾಯಿತ ಪ್ರತಿನಿಧಿಗಳು ತಮ್ಮ ಸಂಬಳವನ್ನು ಹೆಚ್ಚಿಸಿಕೊಳ್ಳಲು ಒಗ್ಗಟ್ಟಾಗುವಾಗ ಈ ವಿಚಾರದಲ್ಲಿ ಒಗ್ಗಟ್ಟಾಗುವುದಿಲ್ಲ ಏಕೆ. ಒಂದು ಸರ್ಕಾರಕ್ಕೆ ತನ್ನ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ಕ್ರಮಬದ್ಧವಾಗಿ ತೆಗೆದುಕೊಳ್ಳಬೇಕು.ಎರಡು ಗುಂಟೆ ಪ್ರದೇಶವಾದರೂ ಅರಣ್ಯ ಇಲಾಖೆ ಅನುಮತಿ ಇಲ್ಲದೆ ಕಟ್ಟಿರುವುದು ಕಾನೂನು ಬದ್ಧವೇ ಹಾಗೆ ಕಾನೂನು ಬದ್ಧ ಎನ್ನುವುದಾದರೆ ಜನರು ಕಟ್ಟಿಕೊಂಡ ಮನೆಗಳು ಕಾನೂನು ಬದ್ಧವಾಗಬೇಕು. ಕೃಷಿ ಮಾಡಿದ ಭೂಮಿಗಳು ಕಾನೂನು ಬದ್ಧವಾಗಬೇಕು. ಅದನ್ನು ಬಿಟ್ಟು ಸರ್ಕಾರದ ಕಾಮಗಾರಿಗಳಿಗೆ ಒಂದು ನಿಯಮ ಜನರಿಗಾದರೆ ಒಂದು ನಿಯಮ ಎನ್ನುವುದು ಸರಿಯೇ?. ಈಗಲಾದರೂ ಜನ ಎಚ್ಚೆತ್ತುಕೊಂಡು ಜನಪ್ರತಿನಿಧಿಗಳನ್ನುಪ್ರಶ್ನೆ ಮಾಡಬೇಕು. ಈಗಲೂ ಪ್ರಶ್ನೆ ಮಾಡದಿದ್ದರೆ ಜನರಿಗೆ ತಾವು ಹಾಕುವ ಓಟಿನ ಬೆಲೆ ಗೊತ್ತಿಲ್ಲ ಎನ್ನುವುದೇ ಅರ್ಥ.
Tags
ಶಿವಮೊಗ್ಗ


