ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಣ ವರ್ತುಲದಲ್ಲಿ ಗೂಳಿ ಕಾಳಗ

 ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಣ ವರ್ತುಲದಲ್ಲಿ ಗೂಳಿ ಕಾಳಗ

ಸುಂದರವಾದ ಪ್ರಜಾಪ್ರಭುತ್ವದಲ್ಲಿ ಹಣ ವೃತ್ತಾಕಾರವಾಗಿ ಸುತ್ತುತ್ತದೆ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಈ ವರ್ತುಲದ ಮುಖ್ಯ ನಿರ್ವಾಹಕರಾಗಿದ್ದಾರೆ. ಅವರುಗಳ ನಿರ್ವಹಣೆಯಲ್ಲಿ ಹಣ ಒಂದು ಕಡೆಯಿಂದ ಒಂದು ಕಡೆಗೆ ಚಲಿಸುತ್ತಿರುತ್ತದೆ. ರಾಜಕಾರಣಿ ಭ್ರಷ್ಟನೋ ಜನ ಭ್ರಷ್ಟರೋ ಎನ್ನುವುದಕ್ಕಿಂತ ಇದರಲ್ಲಿ ಒಬ್ಬರಿಗಿಂತ ಒಬ್ಬರು ನೈತಿಕವಾಗಿ ಅದೋಗತಿಗೆ ಇಳಿದಿದ್ದಾರೆ. ಒಂದು ಸರ್ಕಾರ ಲಕ್ಷಾಂತರ ಕೋಟಿ ಆದಾಯವನ್ನು ಸಂಗ್ರಹಿಸುತ್ತಾ ಅದನ್ನು ಕಾಮಗಾರಿಯ ಹೆಸರಿನಲ್ಲಿ ಮತ್ತು ವಿವಿಧ ಸೇವೆಗಳ ಹೆಸರಿನಲ್ಲಿ ಸ್ವಾಹ ಮಾಡುತ್ತಾರೆ. 


                                                                                ಗೂಗಲ್ ಕೃಪೆ 

ಇದರಲ್ಲಿ ಅಧಿಕಾರಿಗಳ ವರ್ಗ ಪ್ರಮುಖ ಪಾತ್ರ ವಹಿಸುತ್ತದೆ. ಜನಸಾಮಾನ್ಯರು ಯಾವಾಗಲೂ ತಮ್ಮ ಬದುಕಿನ ಅವಸ್ಥೆಯಲ್ಲಿ ಪ್ರಶ್ನಿಸುವುದನ್ನು ಮರೆತಿದ್ದಾರೆ. ಹಿಂದೆ ರಾಜ ಆಡಳಿತ ಇದ್ದಾಗಲೂ ಜನ ದಂಗೆ ಎದ್ದಿಲ್ಲ. ಇಂದು ಪ್ರಜಾಪ್ರಭುತ್ವವಿದೆ .ಆದರೆ ಜನರಿಗೆ ಪ್ರಜಾಪ್ರಭುತ್ವದ ಮೌಲ್ಯಗಳು ತಿಳಿದಿಲ್ಲ. ಇದರ ಪರಿಣಾಮ ರಾಜಕಾರಣಿಗಳು ಹಣವನ್ನು ತಮ್ಮ ಮನಬಂದAತೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಬದಲಾಯಿಸಲು ಆಗುವುದಿಲ್ಲ ಎನ್ನುವ ಮಟ್ಟಕ್ಕೆ ಜನ ಭ್ರಮ ನಿರಸನರಾಗಿದ್ದಾರೆ. ಪೊರಕೆ ಹಿಡಿದು ಗುಡಿಸಲು ಬಂದವರು ಮೂಲೆಗುಂಪಾಗಿದ್ದಾರೆ. ವ್ಯವಸ್ಥೆಯಲ್ಲಿ ಅಕ್ರಮ ಎನ್ನುವುದು ಒಂದು ಕ್ರಮಬದ್ಧ ಮಾರ್ಗದಲ್ಲಿ ಚಲಿಸುತ್ತದೆ. ದುರಾಸೆ ಮತ್ತು ಆಕ್ರಮಣಗಳು ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಇದು ಕಾಲ ನಿಯಮಕ್ಕೆ ಒಳಪಟ್ಟಿದೆ . ಈ ಹಣವೆಂಬ ಬದುಕಿನ ಮೂಲ ದುರಾಸೆಯ ಆಕ್ರಮಣಕ್ಕೆ ಒಳಗಾಗಿ ಸ್ವಕೇಂದ್ರಿ ಕ್ರತ ಮನಸ್ಥಿತಿ ಒಳಗೆ ಸೇರಿಕೊಂಡಿದೆ. ಇದರಿಂದ ಬದುಕುತ್ತಿರುವ ಯಾರು ಸಹ ಹೊರತಾಗಿಲ್ಲ. ಅಕ್ರಮ ಅನ್ನೋದು ಕ್ರಮವಲ್ಲದ ಮಾರ್ಗವಾದರೂ, ಅದನ್ನು ಕಂಡುಹಿಡಿಯುವುದು ಅಸಾಧ್ಯ ವಾಗುತ್ತಿದೆ. ಇತ್ತೀಚಿಗೆ ನಮ್ಮ ಆತ್ಮೀಯರು ನೆದರ್‌ಲ್ಯಾಂಡ್ ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಆ ದೇಶದಲ್ಲಿ ವ್ಯವಸ್ಥೆ ಹೇಗಿದೆ ಎಂದು ಕೇಳಿದೆ. ನೆದರ್ಲ್ಯಾಂಡ್ ದೇಶದಲ್ಲಿ ಅಕ್ರಮಗಳೇ ಇಲ್ಲ ಎಲ್ಲಾದರೂ ಒಂದು ಪರ್ಸೆಂಟ್ ಎರಡು ಪರ್ಸೆಂಟ್ ಅಕ್ರಮವಾದರೂ ಅವರಿಗೆ ಕಠಿಣ ಶಿಕ್ಷೆ ಇರುತ್ತದೆ. 

ಹಾಗಾಗಿ ಯಾರು ಸಹ ಅಕ್ರಮ ಮಾಡಲು ಹೋಗುವುದಿಲ್ಲ. ಅಲ್ಲಿ ಜೈಲುಗಳನ್ನು ಬಾಡಿಗೆಗೆ ಕೊಟ್ಟಿದ್ದಾರೆ. ಕಾರಣ ಕೈದಿಗಳು ಇಲ್ಲ. ಚಿಕ್ಕ ದೇಶವಾದ ನೆದರ್ಲ್ಯಾಂಡ್ ತನ್ನ ವ್ಯವಸ್ಥೆಯನ್ನು ಅತ್ಯಂತ ಕಠಿಣ ನಿಯಮಗಳಲ್ಲಿ ನಿರ್ಮಿಸಿಕೊಂಡಿದೆ. ಆದರೆ ಭಾರತ ದೇಶ ರಾಜಕೀಯಕ್ಕೆ ಅತಿಯಾದ ಮಹತ್ವ ಕೊಟ್ಟು ದೇಶವನ್ನು ರಾಜಪ್ರಭುತ್ವದ ಕಡೆ ತೆಗೆದುಕೊಂಡು ಹೋಗುತ್ತಿದೆ. ಇಲ್ಲಿ ಭ್ರಷ್ಟಾಚಾರ ಮಾಡುವುದು ಅಪರಾಧವೆ ಅಲ್ಲ. ಭ್ರಷ್ಟಾಚಾರವನ್ನು ಪ್ರಶ್ನಿಸೋದು ಅಪರಾಧ ಎನಿಸುತ್ತದೆ. ಯಾರು ಸಹ ಭ್ರಷ್ಟಾಚಾರವನ್ನು ಪ್ರಶ್ನಿಸಬೇಕು ಎಂದುಕೊಳ್ಳುವುದಿಲ್ಲ. ಬರೀ ಟೀಕೆ ಮಾಡುತ್ತಾರೆ ಕಾಲ ಕಳೆಯುತ್ತಾರೆ. ರಚನಾತ್ಮಕವಾಗಿ ಗುಂಪಾಗಿ ಭ್ರಷ್ಟಾಚಾರವನ್ನು ನಿಗ್ರಹಿಸುವ ಕೆಲಸವನ್ನು ಮಾಡಲಾಗುತ್ತಿಲ್ಲ. ಕಾರಣ ಭ್ರಷ್ಟಾಚಾರವನ್ನು ತಡೆಯುವ ಹೋರಾಟವನ್ನು ಮಾಡುವುದಕ್ಕೂ ಹಣದ ಅಗತ್ಯತೆ ಇರುತ್ತದೆ. ಈ ಹಣವನ್ನು ಯಾವ ಮೂಲದಿಂದ ತರಬೇಕು ಎನ್ನುವ ಪ್ರಶ್ನೆ ಮೂಡುತ್ತದೆ. ಪ್ರಾಮಾಣಿಕವಾಗಿ ಭಾರತ ದೇಶದಲ್ಲಿ ದುಡಿಯೋದಾದರೆ ಒಂದು ದಿನಕ್ಕೆ ೫೦೦ ರೂನಿಂದ ಒಂದುವರೆಯಿAದ ೨,೦೦೦ ದುಡಿಯಬಹುದು. 



             ಗೂಗಲ್ ಕೃಪೆ 

    ಅದೇ ಭ್ರಷ್ಟಾಚಾರ ಮಾಡಿದರೆ ಒಂದೇ ದಿನದಲ್ಲಿ ಲಕ್ಷ ಲಕ್ಷ ದುಡಿಯಬಹುದು. ಪ್ರತಿಯೊಬ್ಬರಿಗೂ ಹಣವನ್ನು ತನ್ನ ಕುಟುಂಬದ ಅಗತ್ಯತೆಗಾಗಿ ಸಂಗ್ರಹಿಸಿಡುವ ಮನಸ್ಥಿತಿ ಬೆಳೆದಿದೆ. ಅದಕ್ಕಾಗಿ ಹಣ ಗಳಿಸಿ ಸಂಗ್ರಹಿಸುವುದಕ್ಕಾಗಿ ಯಾವ ಮಾರ್ಗವನ್ನು ಆದರೂ ಅನುಸರಿಸಲು ಸಿದ್ಧರಿದ್ದಾರೆ. ಯಾರು ಬುದ್ಧಿವಂತರೂ ಎಂದುಕೊAಡಿದ್ದಾರೋ ಅವರೇ ಅಪಾಯಕಾರಿಗಳಾಗಿದ್ದಾರೆ. ದೇಶ ಸಮಾಜಕ್ಕಿಂತ ತನ್ನ ತನ್ನ ಕುಟುಂಬದ ಆಸೆ ಆಕಾಂಕ್ಷಿಗಳು ಪ್ರಮುಖವಾಗುತ್ತದೆ. ಅದಕ್ಕಾಗಿ ಸಿಕ್ಕ ಅವಕಾಶವನ್ನು ತನ್ನ ಸ್ವಾರ್ಥಕ್ಕಾಗಿ ಪ್ರತಿಯೊಬ್ಬರೂ ಬಳಸಿಕೊಳ್ಳುತ್ತಾರೆ. ಇದರಲ್ಲಿ ರಾಜಕಾರಣಿಗಳು ಅಧಿಕಾರಿಗಳು ಹೆಚ್ಚು ಅವಕಾಶವನ್ನು ಪಡೆದುಕೊಂಡಿದ್ದಾರೆ. ಉಳಿದಂತೆ ಉದ್ಯಮಿಪತಿಗಳು ಮುಂಚೂಣಿಯಲ್ಲಿದ್ದಾರೆ. ಉಳಿದಂತೆ ಪ್ರತಿಯೊಬ್ಬರು ಬಿಕ್ಷುಕರ ಗುಂಪುಗಳಾಗಿವೆ. ಈ ಬಿಕ್ಷುಕರ ಗುಂಪುಗಳೇ ಪ್ರಜಾಪ್ರಭುತ್ವದ ನತದೃಷ್ಟ ಪ್ರಜೆಗಳು.

             ಗೂಗಲ್ ಕೃಪೆ 

        ಬಜೆಟ್ ನಲ್ಲಿ ಘೋಷಿಸುವ ಲಕ್ಷಾಂತರ ಕೋಟಿ ಹಣ ವಿವಿಧ ಇಲಾಖೆಗಳ ಮೂಲಕ ಜನರಿಗೆ ಹಂಚುತ್ತಾರೆ. ಈ ಹಂಚುವಿಕೆ ಹಸಿದವನಿಗೆ ಒಂದು ಹೊತ್ತಿನ ಊಟ ಕೊಟ್ಟಂತೆ, ಮತ್ತೆ ಅವನು ಹಸಿದಾಗ ಮತ್ತೊಂದು ಚೂರು ಊಟ ಕೊಡುತ್ತಾರೆ. ಹಸಿದವನ ಹೊಟ್ಟೆ ಎಂದು ತುಂಬುವುದಿಲ್ಲ. ಜನರ ಹಸಿವಿನ ಹೆಸರಿನಲ್ಲಿ ರಾಜಕಾರಣಿಗಳು ಅಧಿಕಾರಿಗಳು ಮಾಂಸ ಭಕ್ಷಕ ಪ್ರಾಣಿಗಳಂತೆ ವರ್ತಿಸುವುದು ಜನರಿಗೆ ತಿಳಿದರೂ ಅಸಹಾಯಕರಂತೆ ಬದುಕಬೇಕಾದ ಅವಸ್ಥೆ ಜನರ ನಡುವೆ ಇದೆ.

ಯಾವುದೇ ಕಚೇರಿಯಲ್ಲಿ ಪ್ರಜೆಗಳ ಒಂದು ಪತ್ರಕ್ಕೆ ಉತ್ತರವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಪತ್ರದ ಜೊತೆ ಹಣವನ್ನು ಇಟ್ಟು ಉತ್ತರ 

Post a Comment

Previous Post Next Post