ಇಂದಿನ ವ್ಯವಸ್ಥೆಯಲ್ಲಿ ರಾಜಕಾರಣಿಗಳೇ ತಂದೆ ಅಧಿಕಾರಿಗಳೇ ತಾಯಿ ಅಕ್ರಮ ಸಂತಾನವೇ ಪ್ರಜಾಪ್ರಭುತ್ವ. ನಾರಾಯಣ ಮೂರ್ತಿ.

ಇಂದಿನ ವ್ಯವಸ್ಥೆಯಲ್ಲಿ ರಾಜಕಾರಣಿಗಳೇ ತಂದೆ ಅಧಿಕಾರಿಗಳೇ ತಾಯಿ ಅಕ್ರಮ ಸಂತಾನವೇ ಪ್ರಜಾಪ್ರಭುತ್ವ. 

                                                                                                                     ನಾರಾಯಣ ಮೂರ್ತಿ.

ಇತ್ತೀಚಿನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನೋಡಿ ಚಕ್ರೆ ನಾರಾಯಣ ಮೂರ್ತಿ ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ತಮ್ಮ ಅಭಿಪ್ರಾಯವನ್ನು ಮೇಲ್ಕಂಡAತೆ ತಿಳಿಸಿದ್ದಾರೆ. ಅವರ ಮಾತುಗಳಲ್ಲಿ ವಾಸ್ತವದ ಅರಿವು ಮತ್ತು ಅನುಭವದ ನೋವುಗಳು ಎದ್ದು ಕಾಣುತ್ತಿದ್ದವು. ಬಡತನದಿಂದ ಮುಕ್ತಿ ಪಡೆದು ಸಿರಿವಂತನಾಗಬೇಕು ಎನ್ನುವುದು ಎಲ್ಲರ ಆಸೆ ಅದಕ್ಕಾಗಿ ಎಲ್ಲರೂ ಪ್ರಯತ್ನವೂ ಇರುತ್ತದೆ ಈ ಪ್ರಯತ್ನದಲ್ಲಿ ಕೆಲವರು ಯಶಸ್ವಿಯಾಗುತ್ತಾರೆ. ಸಫಲತೆ ಮತ್ತು ವಿಫಲತೆಯ ಮಾರ್ಗದಲ್ಲಿ ಸಿಗುವ ಅನುಭವಗಳು ವ್ಯಕ್ತಿಯನ್ನು ವ್ಯಕ್ತಿತ್ವವನ್ನು ರೂಪಿಸುತ್ತದೆ. 




    ನಿಜವಾಗಲೂ ಪ್ರಜಾಪ್ರಭುತ್ವದಲ್ಲಿ ರಾಜಕಾರಣ ತಂದೆಯ ಸ್ಥಾನದಲ್ಲಿದೆ. ಅಧಿಕಾರಿಗಳು ತಾಯಿಯ ಸ್ಥಾನದಲ್ಲಿರಬೇಕು ಆದರೆ ಪ್ರಜಾಪ್ರಭುತ್ವ ವ್ಯವಸ್ಥೆ ತಂದೆ ತಾಯಿಯ ಸ್ಥಾನದಲ್ಲಿ ಇರಬೇಕಾದವರು ಅಕ್ರಮ ಸಂಬAಧದ ಬಂಧುತ್ವದ ಅಡಿಯಲ್ಲಿ ನಿಂತಿದ್ದಾರೆ. ದೇಶದಲ್ಲಿ ಯಾವುದೇ ರಾಜಕೀಯ ಪಕ್ಷಗಳು ಬಂದರೂ ಅದೇ ಅಧಿಕಾರಿಗಳು ಕೆಲಸ ಮಾಡುತ್ತಿರುತ್ತಾರೆ ಅಧಿಕಾರಿಗಳು ವರ್ಗವಾಗಬಹುದು ವಿನ ಬದಲಾಗುವುದಿಲ್ಲ. ರಾಜಕಾರಣಿಗಳು ಹೇಳಿದಂತೆ ಅಧಿಕಾರಿಗಳು ಕೆಲಸ ಮಾಡುತ್ತಾರೆ. 



    ಸ್ವತಂತ್ರ ನಿರ್ಣಯ ತೆಗೆದುಕೊಳ್ಳುವ ಹಕ್ಕು ಅಧಿಕಾರಿಗಳಿಗೆ ಇಲ್ಲ. ರಾಜಕಾರಣಿ ಯ ಮರ್ಜಿಗೆ ಒಳಪಟ್ಟು ಅಧಿಕಾರಿಗಳು ಕೆಲಸ ಮಾಡಬೇಕಾಗಿದೆ. ೪೦% ಪರ್ಸೆಂಟ್ ಕಮಿಷನ್ ಎಂದು ಬೊಬ್ಬೆ ಹೊಡೆದ ಒಂದು ಪಾರ್ಟಿ ಈಗ ಅಧಿಕಾರಿಕ ಬಂದಿದೆ. 

೪೦% ನಲ್ಲಿ ತಮ್ಮೆಲ್ಲ ಗ್ಯಾರಂಟಿಗಳನ್ನು ನೀಡುತ್ತೇವೆ ಎಂದು ಬೊಬ್ಬೆ ಹೊಡೆದವರು ಈಗ ಅದೇ ಕಾಂಟ್ರಾಕ್ಟ್ ಗಳ ಬಿಲ್ಲಿಗೆ ೬೦% ನೀಡಬೇಕಾಗಿದೆ ಎಂದು ೪೦%  ಸರ್ಕಾರ ಹೇಳುತ್ತಿದೆ. ಈ ಅಕ್ರಮ ಸಂಬAಧವೇ ರಾಜಕೀಯದ ಬಂಡವಾಳ. ಚುನಾವಣಾ ಸಂದರ್ಭದಲ್ಲಿ ಕಾರ್ಯಕರ್ತರು ಮೂಲಕ ಮತ ಕೇಳುವ ಎಲ್ಲ ರಾಜಕೀಯ ಪಕ್ಷಗಳು ಈ ೪೦% ೬೦% ಕಮಿಷನ್ ಮೇಲೆ ಕೋಟಿ ಕೋಟಿ ಗಳಿಸಿ ಚುನಾವಣೆ ಮಾಡುತ್ತವೆ. ಇಲ್ಲಿ ತಂದೆಯಾದ ರಾಜಕಾರಣಿಗಳು ಪಾರ್ಟಿಯ ಹೆಸರಿನಲ್ಲಿ ಬದಲಾಗುತ್ತಾರೆ. ಆದರೆ ತಾಯಿ ಬದಲಾಗುವುದಿಲ್ಲ. ಆದರೆ ತಾಯಿಗೆ ಮಕ್ಕಳ ಮೇಲೆ ಪ್ರೀತಿ ಇಲ್ಲ. ಕಾರಣ ಅದೊಂದು ಅಕ್ರಮ ಸಂಬAಧವಾಗಿದೆ. ಈ ಅನೈತಿಕ ಸಂಬAಧಕ್ಕೆ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಯಾಗುತ್ತಿದೆ. ರಾಜಕಾರಣಿಗಳು ನಾಟಕೀಯವಾಗಿ ಪ್ರಜೆಗಳನ್ನು ತಮ್ಮ ಮಕ್ಕಳು ಎನ್ನುತ್ತಾರೆ. ಆದರೆ ತಮ್ಮ ಸ್ವಂತ ಮಕ್ಕಳನ್ನು ಬೆಳೆಸುತ್ತಾರೆ. ಅಧಿಕಾರಿಗಳಿಗೂ ತಮ್ಮ ಸ್ವಂತ ಮಕ್ಕಳೇ ಕಾಣಿಸುತ್ತಾರೆ. ಈ ಆಕ್ರಮ ಸಂಬAಧದ ಪರಿಣಾಮ ಪ್ರಜೆಗಳಿಗೆ ತಂದೆ ಪ್ರೀತಿಯೂ ಇಲ್ಲ ತಾಯಿ ಪ್ರೀತಿಯೂ ಇಲ್ಲ. ಅನಾಥ ಪ್ರಜ್ಞೆ ಯಲ್ಲಿ ಪರದೇಶಿಗಳಾಗಿದ್ದಾರೆ. ವ್ಯವಸ್ಥೆಯ ಈ ಅಕ್ರಮ ಸಂಬAಧವನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲವಾಗಿದೆ. ಏಕೆಂದರೆ ಪ್ರಾರಂಭಿಕ ಹುಟ್ಟಿನ ಸಂಬAಧವೇ ಆಕ್ರಮ. ಇರುವಾಗ ಹಕ್ಕುಗಳು ಅರ್ಥವಾಗುವುದು ಹೇಗೆ? ಪ್ರಶ್ನಿಸುವ ಧೈರ್ಯವಂತರನ್ನು ಸಂಶಯದ

ದೃಷ್ಟಿಯಲ್ಲಿ ನೋಡುವ ಈ ಸಮಾಜದಲ್ಲಿ ನಾವಿದ್ದೇವೆ ಎನ್ನುವುದೇ ನಮ್ಮ ವಾಸ್ತವ ಪ್ರಜ್ಞೆ.


Post a Comment

Previous Post Next Post