ಆಧ್ಯಾತ್ಮದ ಬಲೆ ಒಳಗೆ ಜನಸಮುದಾಯ ಭ್ರಮೆಯಿಂದ ಹೊರಬರಲಾಗದ ಜಗತ್ತು.

 ಆಧ್ಯಾತ್ಮದ ಬಲೆ  ಒಳಗೆ ಜನಸಮುದಾಯ  ಭ್ರಮೆಯಿಂದ ಹೊರಬರಲಾಗದ ಜಗತ್ತು.

ಇತ್ತೀಚಿಗೆ ಧರ್ಮಸ್ಥಳದ ಸೌಜನ್ಯ ಕೊಲೆ ಕೇಸು ಮುನ್ನೆಲೆಗೆ ಬಂದಿದೆ. ಧರ್ಮದ ನೆಲೆಬೀಡಿನಲ್ಲಿ ಅನ್ಯಾಯವಾಗಿ ಅನೇಕ ಕೊಲೆಗಳಾಗಿದವೆ. ಅದಕ್ಕೆ ನ್ಯಾಯಕೊಡಬೇಕಾದ ಧರ್ಮದರ್ಶಿಗಳು ಹಣ ಅಧಿಕಾರ ಸ್ವಜನ ಪಕ್ಷಪಾತದಲ್ಲಿ ಅನ್ಯಾಯ ಮಾಡಿದ್ದಾರೆ ಎನ್ನುವ ಚರ್ಚೆ ಪ್ರಾರಂಭವಾಗಿದೆ. 
ಈ ಧಾರ್ಮಿಕ ಕ್ಷೇತ್ರಗಳೇ ಹಾಗೆ, ಅಲ್ಲಿ ಧರ್ಮ ಭ್ರಷ್ಟರು ಕ್ಷೇತ್ರ ಪಾಪಿಗಳು ಸೇರಿಕೊಂಡಿರುತ್ತಾರೆ. ಅದು ಯಾವುದರ್ಮವನ್ನು ಬಿಟ್ಟಿಲ್ಲ. ಕ್ರೈಸ್ತ, ಇಂದು ಹಿಂದು ,ಮುಸ್ಲಿಂ, ಎಲ್ಲಾ ಧರ್ಮ ಗಳಲ್ಲಿಯೂ ಈ ಕ್ಷೇತ್ರ ಪಾಪಿಗಳು ಇದ್ದೇ ಇರುತ್ತಾರೆ. ಕೆಲವು ಬೆಳಕಿಗೆ ಬರುತ್ತದೆ ಕೆಲವು ಬೆಳಕಿಗೆ ಬರುವುದಿಲ್ಲ. 
ಇತ್ತೀಚೆಗೆ ಧಾರ್ಮಿಕತೆ ಹೊಲಸನ್ನು ಮೆತ್ತಿಕೊಂಡು ಕೊಳೆತು ನಾರುತ್ತಿದೆ. ಧರ್ಮ ನಿಂತ ನೀರಾಗಿ ಹಂದಿಗಳ ವಾಸಸ್ಥಳವಾಗುತ್ತಿದೆ. ಧರ್ಮ ಎನ್ನುವುದು ಹೊಟ್ಟೆಯ ಹಸಿವಿನ ಭಾಗವಲ್ಲ. ಆಧ್ಯಾತ್ಮಿಕ ಹಸಿವು ಮನಸ್ಸಿಗೆ ಸಂಬAಧಪಟ್ಟದ್ದು, ದೇಹದ ಹಸಿವು ಹಿಂಗಿದ ಮೇಲೆ ಮನಸ್ಸಿನ ಹಸಿವು ಹೆಚ್ಚಾಗುತ್ತಾ ಹೋಗುತ್ತದೆ. ಮನಸ್ಸಿನ ಹಸಿವಿಗೆ ವಿವಿಧ ಮುಖಗಳಿದ್ದಾವೆ. ಆಧ್ಯಾತ್ಮ ಅನ್ನೋದು ಮಾನಸಿಕ ಭ್ರಮಾಲೋಕದ ಒಂದು ಭಾಗ. ಅದು ನಂಬಿಕೆಯ ಮೇಲೆ ನಿಂತಿದೆ. ನಂಬಿಕೆ ಅನ್ನೋದು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆಯಾಗಿರುತ್ತದೆ. 
                              

ಗೂಗಲ್ ಕೃಪೆ 

ನಾನು ೨೦೦೬ರಲ್ಲಿ ಬೆಳ್ಳಿ ಚಿಂತನೆಗಳು ಎಂಬ ಪುಸ್ತಕದಲ್ಲಿ ದೇವರು ಮಕ್ಕಳ ಮೇಲೆ ಹೇರುವ ವಸ್ತುವಲ್ಲ ಎನ್ನುವ ಲೇಖನವನ್ನು ಬರೆದಿದೆ. ಆ ಲೇಖನದಲ್ಲಿ ನಮ್ಮ ದೇವರುಗಳನ್ನು ನಾವು ನಮ್ಮ ಮಕ್ಕಳ ಮನಸ್ಸಿಗೆ ವರ್ಗಾಯಿಸುತ್ತೆವೆ. ಅವರಿಗೆ ಆ ದೇವರ ಅಗತ್ಯತೆ ಎಷ್ಟು ಅನುಕೂಲತೆಗಳೇನು ಎನ್ನುವ ವಿಚಾರವನ್ನು ತಿಳಿಸದೆ ಬರೀದೆ ಅಂದಶ್ರದ್ದೆಯಾಗಿ ಬೆಳೆಸುತಿದ್ದೇವೆ. ಇದು ಅಪಾಯಕಾರಿ ಏಕೆಂದರೆ ಏಕರೂಪ ವಿವಿಧ ರೂಪಗಳಾಗುವುದೇ ವಿಕಾಸ ಎನಿಸಿಕೊಳ್ಳುವಾಗ, ವಿವಿಧ ರೂಪಗಳು ಅವರವರ ಭಾವ ಭಾವನೆಗಳ ಮೇಲೆ ರೂಪ ಗೊಳ್ಳುವ ಪರಿಣಾಮವಾಗಿದೆ. 
ಅದು ಅವರವರ ದೇವರೇ ವಿನ ಅವರ ಮಕ್ಕಳಿಗೂ ವರ್ಗಾ ಯಿಸುವುದಿಲ್ಲ.ಕುಟುಂ ಬಕ್ಕೂ ಅಲ್ಲ ಹಾಗೆ ದೇವರನ್ನು ಕುಟುಂಬ ಜಾತಿ ಮತದ ಹೆಸರಿನಲ್ಲಿ ತಮ್ಮ ತಮ್ಮ ಮಕ್ಕಳ ಮೇಲೆ ವರ್ಗಾಯಿಸುತ್ತಾ ಹೋದರೆ ಸತ್ಯದ ಮೇಲೆ ಸುಳ್ಳಿನ ಮುಸುಕು ಹಾಕಿದಂತೆ ಆಗುತ್ತದೆ. ಆಗ ಅವರವರ ಮೂಲ ನೆಲೆಯ ಆತ್ಮ ಸ್ಥಿತಿಯನ್ನು ಕೊಂಡುಕೊಳ್ಳಲು ಅವಕಾಶವಿಲ್ಲದಂತೆ ಆಗುತ್ತದೆ. ಇದನ್ನು ಜಿಡ್ಡು ಕೃಷ್ಣಮೂರ್ತಿಯವರು ವಿವರವಾಗಿ ಹೇಳಿದ್ದಾರೆ. 
ಹಾಗೆ ಆಗಿರುವ ಪರಿಣಾಮವೇ ಹಿಂದಿನ ಗೊಂದಲಗಳಿಗೆ ಕಾರಣ ಎಂದರು ತಪ್ಪಿಲ್ಲ. ಮನುಷ್ಯನ ವಿಕಾಸದ ಪಥ ದಲ್ಲಿ ತನ್ನನ್ನು ತನ್ನ ನೆಲೆಯನ್ನು ಕೊಂಡುಕೊಳ್ಳಲು ಮುಕ್ತ ಅವಕಾಶವಿರಬೇಕು. ಆ ಅವಕಾಶವೇ ಮನುಷ್ಯನನ್ನು ಸತ್ಯ ಸಾಕ್ಷಾತ್ಕಾರದ ಹಾದಿಗೆ ಕೊಂಡೊಯುತ್ತದೆ.
ಅದಕ್ಕೆ ವಿರುದ್ಧವಾಗಿ ದೇವರು ಅಂದಶ್ರದ್ಧೆಯಾಗಿ ಬೆಳೆದರೆ ಬೇರೆಯವರ ಮೇಲೆ ಹೇರುವ ವಸ್ತುವಾದರೆ ಅದು ಶೋಷಣೆ ಎನಿಸಿಕೊಳ್ಳುತ್ತದೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ನಾವು ಮೊಟಕುಗೊಳಿಸಿದಂತಾಗುತ್ತದೆ. 
ನಾವು ಮಾರ್ಗದರ್ಶಕರಾಗಬೇಕೆವಿನ ಬೇರೆಯವರನ್ನು ತನ್ನ ಮಾರ್ಗಕ್ಕೆ ಸೆಳೆದುಕೊಳ್ಳುವ ಧಾರ್ಮಿಕ ನಾಯಕತ್ವವಾಗಬಾರದು. ಈ ಧಾರ್ಮಿಕ ನಾಯಕತ್ವ ವ್ಯಕ್ತಿ ವಿಕಸನಕ್ಕೆ ವಿರುದ್ಧವಾಗುತ್ತದೆ.
ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ತನ್ನ ಮನಸುಗಳನ್ನು ಮುಚ್ಚುಮರೆ ಇಲ್ಲದೆ ತೆರೆದಿಡುವ ನ್ಯಾಯ ಸಮ್ಮತ ಬದುಕಿನ ಬೆಳವಣಿಗೆ ಸಮಾಜಕ್ಕೂ ಆರೋಗ್ಯಕರ
ನಮ್ಮ ಮನಸ್ಸಿನ ನೆಮ್ಮದಿಗೂ ಆರೋಗ್ಯಕರ. ನಮ್ಮ ಮನಸ್ಸಿನ ಶಾಂತಿ ನೆಮ್ಮದಿಗಳು ಶೂನ್ಯದಲ್ಲಿ ಭಾವನೆಗಳಿಲ್ಲದ, ವಿರಕ್ತ ಮನಸ್ಥಿತಿಯಲ್ಲಿ ಕೊಂಡುಕೊಳ್ಳಬೇಕು. ಆ ಸ್ಥಿತಿಯನ್ನು ತಲುಪುವುದು ಕಷ್ಟಕರ. 
ಆದರೆ ಒಮ್ಮೆ ಆ ಸ್ಥಿತಿಯನ್ನು ಕಂಡುಕೊAಡರೆ ಮತ್ತೆ ಮತ್ತೆ ಆ ಸ್ಥಿತಿಯ ಅನುಭವಕ್ಕೆ ನೀವು ಹಾತೊರೆಯುತ್ತೀರಿ. ಕಾಮಕ್ಕಿಂತ ಪ್ರೇಮ ಮಿಗಿಲು, ಪ್ರೇಮಕ್ಕಿಂತ ಮಿಗಿಲು ತನ್ನೊಳಗೆ ತನ್ನ ತಾ ಕಂಡುಕೊAಡು ಭಾವರಹಿತ ಸ್ಥಿತಿಯಲ್ಲಿ ಬದುಕುವುದು ಪರಮಾನಂದ ಸ್ಥಿತಿ. ಅದನ್ನೇ ಋಷಿಮುನಿಗಳು ಕೊಂಡುಕೊAಡಿದ್ದರು.
ಹಿAದೂ ಧರ್ಮದ ಶ್ರೇಷ್ಠತೆಗಳಲ್ಲಿ ಅನೇಕ ಮಾರ್ಗಗಳನ್ನು ಆಧ್ಯಾತ್ಮಿಕವಾಗಿ ತಿಳಿಸಲಾಗಿದೆ ಆ ಎಲ್ಲಾ ಮಾರ್ಗಗಳನ್ನು ಆಧುನಿಕ ಪ್ರಪಂಚದಲ್ಲಿ ದುರ್ವಿನಿಯೋಗ ಮಾಡಿಕೊಳ್ಳಲಾಗುತ್ತಿದೆ. ಇತ್ತೀಚಿಗೆ ಅಪ್ಪಾಜಿ ಎನ್ನುವ ಸ್ವಾಮೀಜಿಯನ್ನು ಭೇಟಿ ಮಾಡಲು ಬೇರೆಯವರೊಂದಿಗೆ ಹೋಗಿದ್ದೆ ಅವರು ಲಲಿತ ಸಹಸ್ರನಾಮರ್ಚನೆ ಮತ್ತು ಶ್ರೀಚಕ್ರ ಆರಾಧನೆಯನ್ನು ಜನರಿಗೆ ತಿಳಿಸುತ್ತಾ ಈಗಾಗಲೇ ಎರಡು ಲಕ್ಷದಷ್ಟು ಜನರ ವಾಟ್ಸಪ್ ಗ್ರೂಪ್ ಗಳನ್ನು ಮಾಡಲಾಗಿದೆಯಂತೆ. ಬ್ರಾಹ್ಮಣರ ಆಧೀನದಲ್ಲಿದ್ದ ಸಂಸ್ಕೃತ ಮಂತ್ರಗಳನ್ನು  ಎಲ್ಲಾ ವರ್ಗದ ಜನರಿಗೂ ತಲುಪುವಂತೆ ಮಾಡಿರುವುದು ಸ್ವಾಮೀಜಿಗಳ ಸಾಧನೆ ಇದರೊಂದಿಗೆ ಅವರ ಸತ್ಯ ನಿವೇದನೆ ಮತ್ತು ಅಹಂಕಾರ ರಹಿತ ಬರಹದ ಪುಸ್ತಕಗಳು ಇಷ್ಟವಾಯಿತು. 
ದೇವರನ್ನು ಎಲ್ಲೋ ಎತ್ತರದಿಂದ ನೋಡುವುದಕ್ಕಿಂತ ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವುದು ಹೇಗೆ, ಪೂಜೆ ಮಾಡುವಾಗ ದೇವರನ್ನು ಕಲ್ಪಿಸಿಕೊಳ್ಳುವುದು ಆಕೆಗೆ ಜೀವ ಬಂದAತೆ ತನ್ನೊಂದಿಗೆ ಮಾತನಾಡಿದಂತೆ ನಕ್ಕಂತೆ ಆಶೀರ್ವಾದ ಮಾಡಿದಂತೆ ಕಲ್ಪಿಸುವ ರೀತಿ ಪೂಜೆ ಮಾಡುವ ವಿಧಾನವನ್ನು ಪ್ರಚಾರ ಮಾಡುತ್ತಿದ್ದಾರೆ. 
ಅನೇಕ ಯುಟ್ಯೂಬ್‌ಗಳು ವಿಸಿಲೈಸೇಶನ್ ಹೆಸರಿನಲ್ಲಿ ಇದನ್ನೇ ಹೇಳುತ್ತೇವೆ. ಇಲ್ಲಿ ಭಕ್ತಿ ಮತ್ತು ಮಾನಸಿಕವಾಗಿ ದೇವರು ನನ್ನೊಳಗಿದ್ದಾನೆ ನನಗೆ ಸಹಕಾರ ಮಾಡುತ್ತಿದ್ದಾನೆ. ನನಗೆ ಯಶಸ್ಸನ್ನು ಕೊಡುತ್ತಿದ್ದಾನೆ. ಹಣ ಕೊಡುತ್ತಿದ್ದಾನೆ, ಸಿರಿವಂತಿಗೆ ಕೊಡುತ್ತಿದ್ದಾನೆ, ಎಂದುಕೊಳ್ಳುವುದು ಮಾನಸಿಕ ಪೂಜೆಯ ವಿಧಾನ. ಈ ವಿಧಾನವನ್ನು ಹಿಂದೂ ಧರ್ಮದಲ್ಲಿ ಹೇಳಲಾಗಿತ್ತು. 
ಅದನ್ನು ಅಪ್ಪಾಜಿ ಎಂದು ಕರೆಸಿಕೊಳ್ಳುವ ಸ್ವಾಮೀಜಿ ಸಾರ್ವಜನಿಕವಾಗಿ ಜನಸಾಮಾನ್ಯರಿಗೆ ಪ್ರಚಾರ ಮಾಡುತ್ತಿದ್ದಾರೆ. ಯಾವುದೇ ಹಣ ತೆಗೆದುಕೊಳ್ಳದೆ ಉಚಿತವಾಗಿ ಕಾರ್ಯಕ್ರಮ ಮಾಡುತ್ತಿರುವುದು ಹೆಮ್ಮೆಯ ವಿಷಯ. ಆದರೆ ಧರ್ಮವನ್ನು ಕ್ಷಾತ್ರೀಯ ಗುಣದಿಂದ ಎತ್ತಿಹಿಡಿಯಬೇಕು. ಯಾರೋ ರಕ್ಷಿಸುತ್ತಾರೆ
ಎನ್ನುವ ಭಾವನೆ ಮನುಷ್ಯನ ಪುರುಷಾರ್ಥವನ್ನು ನಾಶ ಮಾಡುತ್ತದೆ. ಭಕ್ತಿ ಮಾರ್ಗದಿಂದ ದೇವರು ಭಾವನಾತ್ಮಕವಾಗಿ ಮನುಷ್ಯನ ಮನಸ್ಸಿಗೆ ನೆಮ್ಮದಿಯನ್ನು ಶಾಂತಿಯನ್ನು ಪ್ರೀತಿಯನ್ನು ನೀಡುತ್ತದೆ. ಆದರೆ ಅದರೊಂದಿಗೆ ನಿರ್ಲಿಪ್ತತೆಯನ್ನು ಸಹ ನೀಡುತ್ತದೆ. ಮನುಷ್ಯ ಸಮಾಜ ಮುಖ್ಯ ಹಾಗೂ ಬದಲು ಸ್ವಾರ್ಥ ಮುಖಿ ಆಗುತ್ತಿದ್ದಾನೆ. ಈ ಸ್ವಾರ್ಥ ಮುಖ ಸಾಮಾಜಿಕ ಶೋಷಣೆಯ ಒಂದು ಭಾಗವಾಗಿದೆ. ತಾನು ತನ್ನ ಕುಟುಂಬ ಸುಖವಾಗಿರಬೇಕು ಎನ್ನುವ ಭಾವನೆ ಯಲ್ಲಿ ಸಮಾಜ ಅಭಿವೃದ್ಧಿ ಹೊಂದುತ್ತಾ ಹೋದರೆ ಸಾಮಾಜಿಕ ಶೋಷಣೆಯ ಮುಖ ಒಂದು ತೆರೆದುಕೊಳ್ಳುತ್ತದೆ. 
ಆಧ್ಯಾತ್ಮಿಕತೆ ಸಾಮ್ರಾಜ್ಯ ಕಟ್ಟುವ ಮನಸ್ಥಿತಿಯಿಂದ ಹೊರಬಂದಿರಬೇಕು. ಆದರೆ ಮಠ ದೇವಸ್ಥಾನ ಮಸೀದಿ ಚರ್ಚ್ ಎಲ್ಲವೂ ಒಂದು ಅಧಿಕಾರ ಮತ್ತು ಸಾಮ್ರಾಜ್ಯ ಎರಡನ್ನೂ ಹೊಂದಿರುವ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯನ್ನು ನಡೆಸಿಕೊಂಡು ಹೋಗಲು ಆ ವ್ಯವಸ್ಥೆಯಲ್ಲಿ ಸತ್ಯದ ಅನಾವರಣವನ್ನು ಮಾಡದೆ ಸುಳ್ಳಿನ ಮೇಲೆ ಶೋಷಣೆಯ ಮೇಲೆ ಧರ್ಮವನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುತ್ತ ಹೋಗುತ್ತೇವೆ. ಇದಕ್ಕಿಂತ ಅಪಾಯಕಾರಿ ಬೇರೆ ಬೇಕಾಗಿಲ್ಲ. ಇದಕ್ಕೆ ಉದಾಹರಣೆ ಇಡೀ ಪ್ರಪಂಚದಲ್ಲಿ ನಡೆಯುತ್ತಿರುವ ಭಯೋತ್ಪಾದನೆಗಳು. ತಾನೇ ಶ್ರೇಷ್ಠ ಎನ್ನುವ ಮನೋಭಾವನೆ, ತಾನು ಮಾಡಿದರೆ ಸರಿ ಬೇರೆಯವರು ಮಾಡಿದರೆ ತಪ್ಪು ಎನ್ನುವ ಭಾವನೆ ಸರಿಯಲ್ಲ. ಧರ್ಮದಲ್ಲಿ ಸತ್ಯಕ್ಕಿಂತ ಸುಳ್ಳೆ ಹೆಚ್ಚಾಗಿರುತ್ತದೆ. ಅದನ್ನು ವಿಮರ್ಶೆ ಮಾಡಲು ಯಾರು ಹೋಗುವುದಿಲ್ಲ. ಹೋದವರನ್ನು ಅದೇ ಧಾರ್ಮಿಕ ಅನುಯಾಯಿಗಳು ಉಳಿಯುವುದಕ್ಕೂ ಬಿಡುವುದಿಲ್ಲ.

Post a Comment

Previous Post Next Post