ಡಿಕೆಶಿ ಮುಖ್ಯಮಂತ್ರಿ ಕನಸು ಬಿಜೆಪಿ ಜೆಡಿಎಸ್ ಸಖ್ಯದಿಂದ ಮಾತ್ರ ಸಾಧ್ಯ.
ಕರ್ನಾಟಕ ಕಾಂಗ್ರೆಸ್‌ನಲ್ಲಿ ಪವರ್ ಸ್ಟೇರಿಂಗ್ ನಲ್ಲಿ ಇಬ್ಬರ ಹೋರಾಟ ಮುಂದುವರಿಯುತ್ತದೆ. ಸನ್ನಿವೇಶಗಳನ್ನು ಅವಲೋಕನ ಮಾಡಿದರೆ ಡಿಕೆಶಿಗೆ ಮುಖ್ಯಮಂತ್ರಿ ಪದವಿಯನ್ನು ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಬಿಟ್ಟು ಕೊಡುವುದಿಲ್ಲ. ಸಿದ್ದರಾಮಯ್ಯನ ಮೊಂಡು ಹಠವಾದಿತನ ಕಾಂಗ್ರೆಸ್ಸಿನ ಅವನತಿಗೆ ಕಾರಣವಾಗುತ್ತದೆ. ಹೈಕಮಾಂಡ್
ಯಾವುದೇ ನಿರ್ಣ ಯಕ್ಕೆ ಬರಲು ಸಾಧ್ಯವಿಲ್ಲ. ಅಧಿಕಾರದ ಹುಚ್ಚು ಭ್ರಮೆ ಅದೆಷ್ಟು ಕಾಡುತ್ತದೆ ಎಂದರೆ ೫ ವರ್ಷ ನಾನೇ ಸಿಎಂ ಮುಂದಿನ ಐದು ವರ್ಷವು ನಾನೇ ಸಿಎಂ ಎನ್ನುವ ಸಿದ್ದರಾಮಯ್ಯ ಸಾಯೋವರೆಗೂ ಕುರ್ಚಿ ಬಿಡುವುದಿಲ್ಲ ಎನ್ನುವ ಸಂದೇಶವನ್ನು ನೀಡುತ್ತಿದ್ದಾರೆ. ಸಿದ್ದರಾಮಯ್ಯನ ಈ ಸಂದೇಶ ಕ್ಕೆ ಯಾವುದೇ ವೈಚಾರಿಕತೆ ಇಲ್ಲ. ಒಂದಷ್ಟು ಹೊಂದಾಣಿಕೆ ಮಾಡಿಕೊಳ್ಳಲು ಸಿದ್ದನಿಲ್ಲದ ಮೊಂಡು ಮನಸ್ಥಿತಿ ಇದೆ. ಇದು ಒಳ್ಳೆಯ ಸ್ಥಿತಿಯಲ್ಲ. ಸದಾಕಾಲ ತಾನೇ ರಾಜ್ಯವಾಳ ಬೇಕು ಎನ್ನುವ ಮನಸ್ಥಿತಿ ಪ್ರಜಾಪ್ರಭುತ್ವಕ್ಕೆ
ಹೇಳಿಸಿದ್ದಲ್ಲ. ಆದರೆ ಸಿದ್ದರಾಮಯ್ಯ ಮನಸ್ಥಿತಿ ತಾನು ನಾಶವಾಗುವುದಾದರೆ ಸರ್ವವನ್ನು ನಾಶ ಮಾಡುತ್ತೇನೆ ಎನ್ನುವಂತೆ ಇದೆ.
ಡಿಕೆಶಿ ಯವರ ಜಾತಕದಲ್ಲಿ ಏನಿದೆಯೋ ಜ್ಯೋತಿಷಿಗಳು ಊಹೆ ಮಾಡಿ ಒಬ್ಬೊಬ್ಬರು ಒಂದೊAದು ರೀತಿ ಹೇಳುತ್ತಾರೆ. ಆದರೆ ವಾಸ್ತವ ಸ್ಥಿತಿ ಗಳನ್ನು ಕಾಣು ವಾಗ ಡಿಕೆಶಿಗೆ ಮುಖ್ಯಮಂತ್ರಿ ಯೋಗ ಇರುವುದು ಬಿಜೆಪಿ ಮತ್ತು ಜೆಡಿಎಸ್ ಸತ್ಯದಿಂದ ಮಾತ್ರ ಸಾಧ್ಯ.
ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ದವರಿಗೆ ಯಾವತ್ತೂ ಬೆಲೆ ಸಿಕ್ಕಿಲ್ಲ. ಪಕ್ಷನಿಷ್ಠೆಗಿಂತ ಅವಕಾಶವಾದಿಗಳೇ ಹೆಚ್ಚು ಲಾಭ ಮಾಡಿಕೊಂಡಿದ್ದಾರೆ. ಡಿಕೆಶಿ ಹೋರಾಟದ ಮುಂದೆ ಸಿದ್ದರಾಮಯ್ಯ ವರ್ಚಸ್ಸು ಕಡಿಮೆನೇ. ಆದರೆ ಸಿದ್ದರಾಮಯ್ಯನ ತಂತ್ರಗಾರಿಕೆ ಮುಂದೆ ಡಿಕೆಶಿಯ ನೇರ ನಡೆ-ನುಡಿ ಎದೆಗಾರಿಕೆ ಸೋಲು ಅಂತಾಗಿದೆ. ಈಗ ಚೆಂಡು ಡಿಕೆಶಿ ಅಂಗಳದಲ್ಲಿದೆ. ಬಿಜೆಪಿ ಕಾಂಗ್ರೆಸ್ಸನ್ನು ಸರ್ವನಾಶ ಮಾಡಲು ಕಾದು ಕುಳಿತಿದೆ. ಡಿಕೆಶಿ ಗ್ರೀನ್ ಸಿಗ್ನಲ್ ಕೊಟ್ರೆ ಬಿಜೆಪಿ ಬಾಹ್ಯ ಬೆಂಬಲವನ್ನು ಕೊಟ್ಟು ಡಿಕೆಶಿ ಮತ್ತು ಪಟಾಲನ್ನು ಸರ್ಕಾರ ನಡೆಸಲು ಅವಕಾಶ ನೀಡುತ್ತದೆ. ರಾಜಕೀಯದಲ್ಲಿ ಮೈತ್ರಿಗಳಿಗೆ ಪವಿತ್ರತೆ ಅಪವಿತ್ರತೆ ಯಾವುದು ಇಲ್ಲ. ಕಾಲಕಾಲಕ್ಕೆ ಮೈತ್ರಿ ಯಾಗುತ್ತದೆ ಮಿತ್ರರು ಶತ್ರುಗಳಾಗುತ್ತಾರೆ .
ಶತ್ರುಗಳು ಮಿತ್ರರಾಗುತ್ತಾರೆ. ಅಧಿಕಾರಕ್ಕಾಗಿ ಯಾವುದಕ್ಕೂ ಹೇಸದ ರಾಜಕಾರಣದಲ್ಲಿ ಡಿಕೆಶಿ ಗೆ ಬಿಜೆಪಿ ಬೆಂಬಲಿಸಿದರೆ ಕಪ್ಪೇನು ಇಲ್ಲ. ಬಿಜೆಪಿಗೆ ಹಿಂದುತ್ವದ ಅಜೆಂಡಾದ ಡಿ ಕೆಲಸ ಮಾಡುತ್ತದೆ. ಸಿದ್ದರಾಮಯ್ಯ ಅಲ್ಪಸಂಖ್ಯಾತರ ಓಲೈಕೆಯಲ್ಲಿ ಮುಳುಗಿರುವುದು , ಬಿಜೆಪಿಗೆ ಅನುಕೂಲಕರವಾದ ವಾತಾವರಣವನ್ನು ನಿರ್ಮಾಣ ಮಾಡಿಕೊಡುತ್ತಿದೆ. ಈಗಾಗಲೇ ೧೮ರಿಂದ೨೦ ಪರ್ಸೆಂಟ್ ಇರುವ
ಮುಸ್ಲಿಮರು ಮೀಸಲಾತಿ ಕೇಳುತ್ತಿರುವುದು ದುರಂತ. ನ್ಯಾಯವಾಗಿ ೧೮ ೨೦% ಇರುವ ಮುಸ್ಲಿ ಮರು ಅಲ್ಪಸಂಖ್ಯಾತರ ಪಟ್ಟಿಯಿಂದ ಹೊರ ಬರುತ್ತಾರೆ. ಆದರೂ ಈಗ ೧೦% ಮೀಸಲಾತಿ ಕೇಳುತ್ತಿರುವುದು ಸಿದ್ದರಾಮಯ್ಯನ ಬಲದಿಂದ. ಮುಖ್ಯಮಂತ್ರಿ ಪದವಿ ಯಾವುದೇ ಒಂದು ಜನಾಂಗಕ್ಕಲ್ಲ ಜಾತಿಗಲ್ಲ. ಸಮಾನತೆಯ ಮಾತನಾಡುವ ರಾಜಕಾರಣಿಗಳು ಕೆಲಸದಲ್ಲಿ
ಒಡೆದಾಡುವ ನೀತಿಯನ್ನೇ ಅನುಸರಿಸುತ್ತದೆ. ಡಿಕೆಶಿ ಬಿಜೆಪಿಗೆ ಬಂದರೆ ಬಿಜೆಪಿ ವಾಷಿಂಗ್ ಮಿಷನ್ ನಲ್ಲಿ ಶುದ್ಧರಾಗಿ ಹೊರಹೊಮ್ಮುವ ಸಾಧ್ಯತೆಗಳು ಇದೆ. ಆದ್ರೂ ಡಿಕೆಶಿ ಆತುರ ಮಾಡುತ್ತಿಲ್ಲ. ನಿಜವಾಗಲೂ ಡಿಕೆಶಿ ತಾಳ್ಮೆಗೆ ಗೌರವ ಸಲ್ಲಿಸಬೇಕು. ಸಿದ್ದರಾಮಯ್ಯ ಮತ್ತು ಅವರ ಗ್ಯಾಂಗ್ ನೀಡುತ್ತಿರುವ ಕಿರುಕುಳಕ್ಕೆ ಡಿಕೆಶಿ ಸಿಡಿದೇಳದೇ ಇರುವುದು ಆಶ್ಚರ್ಯಕರ. ರಾಜಕೀಯದ ಚದುರಂಗದಲ್ಲಿ ಅಂತಿಮ ಹಂತದ ಆಟ ನಡೆಯುತ್ತಿದೆ. ಯಾವ ಜ್ಯೋತಿಷಿ ಏನೇ ಹೇಳಿದ್ರು,
ನನ್ನ ದೃಷ್ಟಿಯಲ್ಲಿ ಡಿಕೆಶಿಗೆ ಮುಖ್ಯ ಮಂತ್ರಿ ಯೋಗ ಎನ್ನುವುದು ಇರುವುದಾದರೆ ಅದು ಸ್ವಂತ ಮನೆಯೊಳಗಿಲ್ಲ.
ಬೇರೆಯವರ ಶತ್ರುವಿನ ಮನೆಯ ಮಿತ್ರತ್ವದೊಂದಿಗೆ ಅಧಿಕಾರ ಬಲ ಎಂದು ಭವಿಷ್ಯವಾಣಿ ನುಡಿಯಬಹುದು. ಅನೇಕ ಕಾಲಜ್ಞಾನಿಗಳು, ಕೋಡಿಮಠ ಎಲ್ಲರೂ ಒಂದೊAದು ರೀತಿ ಹೇಳಿದಂತೆ ನಾವು ಸಹ ಭವಿಷ್ಯ ಹೇಳುತ್ತಿದ್ದೇವೆ.

.jpg)