ಶಿವಮೊಗ್ಗ ಮಹಾನಗರ ಪಾಲಿಕೆಯ ಕಟ್ಟಡಗಳಿಗೆ ಪಾರ್ಕಿಂಗ್ ಸ್ಥಳಗಳೇ ಇಲ್ಲ.

 ಕಟ್ಟಡಗಳಿಗೆ ಆಕ್ಯುಪನ್ಸಿ ಲೆಟರ್ ಕೊಡದ ಶಿವಮೊಗ್ಗ ಮಹಾನಗರ ಪಾಲಿಕೆ.
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಕಳೆದ ಎರಡು ವರ್ಷಗಳಿಂದ ಲೈಸನ್ಸ್ ಕೊಟ್ಟು ಕಟ್ಟಡ ನಿರ್ಮಾಣ ಮಾಡಿದ ಯಾವುದೇ ಕಟ್ಟಡಗಳಿಗೆ ವಾಸ ಯೋಗ್ಯ ದೃಢೀಕರಣ ಅಥವಾ ಆಕ್ಯುಪನ್ಸಿ ಲೆಟರ್ ನೀಡಿರುವುದಿಲ್ಲ ಈ ಬಗ್ಗೆ ಮಹಾನಗರ ಪಾಲಿಕೆಯನ್ನು ಕೇಳಿದರೆ ಅದನ್ನು ಸಂಬಂಧಪಟ್ಟ ಕಟ್ಟಡದವರು ಕೇಳಿದರೆ ಮಾತ್ರ ನೀಡುತ್ತೇವೆ ಎಂದಿರುತ್ತಾರೆ. ಕಟ್ಟಡದ ನಿರ್ಮಾಣದ ಸಂದರ್ಭದಲ್ಲಿ ನೀಡಿದ ಪ್ಲಾನಿಂಗ್ ನಂತೆ ಕಟ್ಟಡ ನಿರ್ಮಾಣ ಮಾಡಿದೆ ಮನ ಬಂದಂತೆ ಪಾರ್ಕಿಂಗ್ ಸ್ಥಳವನ್ನೂ ಬಿಡದೆ ಕಟ್ಟಡ ನಿರ್ಮಾಣ ಮಾಡಿದ ಅದೆಷ್ಟೋ ಕಟ್ಟಡಗಳು ಶಿವಮೊಗ್ಗದಲ್ಲಿದೆ. 

ಯಾವುದೇ ಆಸ್ಪತ್ರೆ ,ಶಾಪಿಂಗ್ ಕಾಂಪ್ಲೆಕ್ಸ್, ಬಹುಮಹಡಿ ಕಟ್ಟಡಗಳನ್ನು ಮಾಡಿದ ಕಟ್ಟಡಗಳಿಗೆ ಪಾರ್ಕಿಂಗ್ ಸ್ಥಳಗಳೇ ಇಲ್ಲ. ಇದರಿಂದಾಗಿ ಟ್ರಾಫಿಕ್ ಸಮಸ್ಯೆ ಉಂಟಾಗಿದ್ದು ಈ ಬಗ್ಗೆ ಮಹಾನಗರ ಪಾಲಿಕೆಯನ್ನು ಕೇಳಿದರೆ ಇಂಜಿನಿಯರಗಳು ಸದಸ್ಯರುಗಳ ಮೇಲೆ ರಾಜಕೀಯ ಒತ್ತಡಗಳ ಮೇಲೆ ಈ ಎಲ್ಲಾಅ ವ್ಯವಸ್ಥೆ ಆಗಿದೆ ಎನ್ನುತ್ತಿದ್ದಾರೆ. ಲಿಖಿತವಾಗಿ ಯಾವುದೇ ಕಟ್ಟಡಗಳಿಗೂ ಆಕ್ಯುಪನ್ಸಿ ಲೆಟರ್ ನೀಡಿಲ್ಲ ಎಂದು  ಮಾಹಿತಿ ನೀಡುತ್ತಾರೆ.

Post a Comment

Previous Post Next Post