ಶಿರಸಿಯಲ್ಲಿ ಅರಣ್ಯ ಭೂಮಿ ರೈತರ ಹೋರಾಟ ರವೀಂದ್ರ ನಾಯಕ್ 30 ವರ್ಷದ ಸಾಧನೆ ಏನು

 

ಶಿರಸಿಯಲ್ಲಿ ಅರಣ್ಯ ಭೂಮಿ ರೈತರ ಹೋರಾಟ ರವೀಂದ್ರ ನಾಯಕ್ 30 ವರ್ಷದ ಸಾಧನೆ ಏನು ?




ಸಿರ್ಸಿಯಲ್ಲಿ ಅರಣ್ಯ ಭೂಮಿ ರೈತರ ಹೋರಾಟ. ಮೇಲ್ಮನವಿ ಅರ್ಜಿ ರವೀಂದ್ರ ನಾಯಕ್ .
 ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ಭಾಗದಲ್ಲಿ ರವೀಂದ್ರ ನಾಯಕ್ ಅರಣ್ಯ ಭೂಮಿ ರೈತರ ಪರವಾಗಿ ಬೃಹತ್ ಹೋರಾಟವನ್ನು ಮಾಡಿದ್ದು, ಮೇಲ್ಮನೆ ಅರ್ಜಿ ಹಾಕಲು ರೈತರು ಒಗ್ಗಟ್ಟಾಗಿದ್ದು ಸಿರ್ಸಿ ಭಾಗದ ಜನರ ಸಂಘಟನಾ ಮನೋಭಾವನೆಯನ್ನು ಎತ್ತಿ ತೋರಿಸುತ್ತದೆ.ಹೋರಾಟಗಳು ಒಂದು ಕಾಲಮಿತಿಯೊಳಗೆ ಫಲ ನೀಡುವುದಿಲ್ಲ. ನಿರಂತರವಾಗಿ ಹೋರಾಟ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ರವೀಂದ್ರ ನಾಯಕ್ ಸ್ವಾತಂತ್ರ್ಯ 30 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿತ್ತು. ಅರಣ್ಯ ಭೂಮಿ ಸಾಗುವಳಿ ಬಗ್ಗೆ ನಾನೇ ತಂದೆ ನಾನೇ ತಾಯಿ ಎಂದು ಅಬ್ಬರಿಸಿ ಮಾತನಾಡಿದ್ದಾರೆ. ಈ ನಡುವೆ ಅನೇಕ ಅರಣ್ಯ ಇಲಾಖಾ ವಲಯಗಳಲ್ಲಿ ಜಾಥಾ ನಡೆಸಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳ ಮುಂದೆ ಅರಣ್ಯ ಇಲಾಖೆಯ ದೌರ್ಜನ್ಯವನ್ನು ಪ್ರಶ್ನಿಸುತ್ತಾ ಬಂದಿದ್ದಾರೆ. ಸ್ವತಹ ರವೀಂದ್ರ ನಾಯಕ್ ವಕೀಲರಾಗಿದ್ದು, ಕಾನೂನು ಮಾಹಿತಿ ಇರುವಂತೆ ಈ ಅರಣ್ಯ ಭೂಮಿ ಸಾಗುವಳಿಯ ವಿಷಯದಲ್ಲಿ ಕೆಳಮಟ್ಟದ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಅರಣ್ಯಇಲಾಖೆಯ ಕಾಯ್ದೆ ಕಾನೂನುಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬದಲಾವಣೆಗಳಾಗಬೇಕು. ಜನರೆದುರು ನ್ಯಾಯ ಕೊಡಿಸುತ್ತೇನೆಂದು 30 ವರ್ಷಗಳಿಂದ ಹೋರಾಟ ಕಟ್ಟಿದ ರವೀಂದ್ರ ನಾಯಕ್ ಹೋರಾಟದ ಫಲ ಶ್ರುತಿ ಏನು ಎನ್ನುವುದನ್ನು ತಿಳಿಸಬೇಕಾಗಿದೆ. ಹೋರಾಟಗಳು ನಾಯಕನನ್ನು ಹುಟ್ಟುಹಾಕುತ್ತದೆ. ನಾಯಕತ್ವವು ಜನರನ್ನು ದಾರಿ ತಪ್ಪಿಸುವಂತಾಗಬಾರದು. ಜನಸಂಘಟನೆ ಅದ್ಭುತವಾಗಿ ಮಾಡುತ್ತಾ ಬಂದ ರವೀಂದ್ರ ನಾಯಕ್ ಒಬ್ಬ ರಾಜಕಾರಣಿಯಾಗಿಯೂ ಯಶಸ್ವಿ ಆಗಬಹುದು. ಜನರ ಸಮಸ್ಯೆಗಳ ಗಂಭೀರತೆಯನ್ನು ಸರಕಾರಗಳ ಮುಂದೆ ಮಂಡಿಸಲು ಜನ ಬೆಂಬಲದ ಅಗತ್ಯತೆ ಇದೆ ಅದನ್ನು ರವೀಂದ್ರ ನಾಯಕ್ ಮಾಡುತ್ತಾ ಬಂದಿದ್ದಾರೆ.
 ಈ ನಿಟ್ಟಿನಲ್ಲಿ ಸಿರ್ಸಿ ಭಾಗದ ಜನರು ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಮನಸ್ಥಿತಿ ಅತ್ಯುತ್ತಮವಾಗಿದೆ. ನಾಯಕತ್ವವನ್ನು ಒಪ್ಪಿಕೊಳ್ಳುವ ಜನರು ನಾಯಕತ್ವವನ್ನು ಪ್ರಶ್ನಿಸುವ ಜನರು ಭಿನ್ನ ಭಿನ್ನವಾಗಿ ಆಲೋಚಿಸುತ್ತಾರೆ. ನಾಯಕತ್ವವನ್ನು ಪ್ರಶ್ನಿಸುವ ಜನರು ಎಂದಿಗೂ ನಾಯಕನನ್ನು ಸೃಷ್ಟಿಸುವುದಿಲ್ಲ. ಸಿರ್ಸಿ ಭಾಗದ ಜನರು ಈ ವಿಚಾರದಲ್ಲಿ ಬುದ್ದಿವಂತರು. ಹೋರಾಟ ಇಂದ ಮೇಲೆ ಹಣಕಾಸು ಅನಿವಾರ್ಯ. ರವೀಂದ್ರ ನಾಯಕರಿಗೆ ಚ
 ಜನಬೆಂಬಲ ದೊಂದಿಗೆ ಹಣ ಬೆಂಬಲವನ್ನು ನೀಡಿ 30 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಲು ಸಹಾಯ ಮಾಡಿದ್ದಾರೆ. 30 ವರ್ಷಗಳಿಂದಲೂ ಸಮಸ್ಯೆ ಬಗೆಹರಿಯುತ್ತೆ ಎನ್ನುವ ಪ್ರಶ್ನೆ ಗೆ ಉತ್ತರ ಸಿಗದೇ ಇದ್ದರೂ ನಾಯಕತ್ವ ಬೆಳೆದು ನಿಂತಿದೆ. ಮುಂದಿನ ದಿನಗಳಲ್ಲಿ ಸರಕಾರ ನ್ಯಾಯಾಲಯ ಜನರ ಸಮಸ್ಯೆಗಳನ್ನು ಆಲಿಸುವ ಮಟ್ಟಕ್ಕೆ ಹೋರಾಟವನ್ನು ಬೆಳೆಸಿದ ರವೀಂದ್ರನಾಯ್ಕ ಸಿರ್ಸಿ ಭಾಗದ ಜನನಾಯಕನಾಗಿ ರಾಜಕಾರಣಿಯಾಗಿ ಬೆಳೆದಿದ್ದಾರೆ.
 ಸದ್ಯದ ಪರಿಸ್ಥಿತಿಯಲ್ಲಿ ಅರಣ್ಯ ಭೂಮಿ ಸಾಗುವಳಿ ವಿಚಾರ ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ಸಂಘಟನೆ ಈ ವಿಚಾರದಲ್ಲಿ ಜಾಗರೂಕರಾಗಿರಬೇಕು. ಮೇಲ್ಮನವಿಯನ್ನು ಯಾರಿಗೆ ನೀಡಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ. ರಾಜ್ಯ ಸರ್ಕಾರ ಅರಣ್ಯ ಇಲಾಖೆ ಕಾಯ್ದೆಗಳ ಬಗ್ಗೆ ಯಾವುದೇ ತೀರ್ಮಾನಗಳನ್ನು ಕೈಗೊಳ್ಳುವ ಶಕ್ತಿ ಇಲ್ಲ. 1980 ಅರಣ್ಯ ಸಂರಕ್ಷಣಾ ಕಾಯ್ದೆ ಸಂಪೂರ್ಣ ಅರಣ್ಯದ ಹಕ್ಕುಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಿದೆ. ಆ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸರಿಯಾದ ಮಾಹಿತಿಯನ್ನು ನೀಡದೇ ಇರುವುದು ಮಲೆನಾಡಿನ ಜನರಿಗೆ ಶಾಪವಾಗಿದೆ. ಈ ಎಲ್ಲಾ ಅಂಶಗಳು ರವೀಂದ್ರ ನಾಯಕರಿಗೂ ತಿಳಿದಿದೆ. ಆದರೂ ಸಹ ಹೋರಾಟವನ್ನು ಜೀವಂತವಾಗಿಟ್ಟುಕೊಳ್ಳಲು ರಾಜಕಾರಣದ ಕೆಲವು ಮಾರ್ಗಗಳು ಅನಿವಾರ್ಯವಾಗುತ್ತದೆ. ಅದನ್ನೇ ರವೀಂದ್ರ ನಾಯಕರು ಬಳಸಿಕೊಳ್ಳುತ್ತಿದ್ದಾರೆ. ಮೇಲ್ಮನವಿ ಅರ್ಜಿ ಸಲ್ಲಿಸಿದಾಕ್ಷಣ ಸಮಸ್ಯೆ ಬಗೆಹರಿಯುವುದಿಲ್ಲ. ಆದರೆ ಮೇಲ್ಮನವಿ ಅರ್ಜಿ ಎನ್ನುವುದು ನಾವು ಅನ್ಯಾಯಕ್ಕೆ ಒಳಗಾಗಿದ್ದೇವೆ ಅನ್ನೋದನ್ನು ತಿಳಿಸುವ ಪ್ರಯತ್ನವಾಗಿದೆ. ಈ ಪ್ರಯತ್ನದಲ್ಲಿ ರವೀಂದ್ರ ನಾಯಕ್ ಉತ್ತರ ಕನ್ನಡ ಜಿಲ್ಲಾ ಭಾಗದಲ್ಲಿ ಯಶಸ್ವಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. 

Post a Comment

Previous Post Next Post