ಮಲ್ಲಂದೂರು ಅರಣ್ಯ ಭೂಮಿ ಒತ್ತುವರಿ ತೆರವು ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ

 

ಮಲ್ಲಂದೂರು ಅರಣ್ಯ ಭೂಮಿ ಒತ್ತುವರಿ ತೆರವು ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ



ಹೋರಾಟಗಳಿಂದ ಜನ ದೂರವಾಗಿದೇಕೆ?
 ಜನರು ತಮ್ಮ ತಮ್ಮ ಸಮಸ್ಯೆಗಳನ್ನು ಹೋರಾಟಗಳ ಮೂಲಕ ಬಗೆಹರಿಸಿಕೊಳ್ಳುವ ಮನಸ್ಥಿತಿಯಲ್ಲಿಲ್ಲ ಏಕೆಂದರೆ ಈಗಾಗಲೇ ಅನೇಕ ಹೋರಾಟಗಳನ್ನು ನೋಡಿ ಯಾವುದು ಅನುಕೂಲಗಳನ್ನು ಮಾಡದೆ ಇದ್ದಾಗ ಹೋರಾಟಗಳಿಂದ ಜನ ವಿಮುಕರಾಗಿದ್ದಾರೆ. ಅದರಲ್ಲಿಯೂ ರೈತರು ಹೋರಾಟಗಳಲ್ಲಿ ಒಂದಾಗುವುದು ಬಾರಿ ಅಪರೂಪ. ಹೋರಾಟ ಎನ್ನುವುದು ಒಂದು ಸಮುದಾಯದ ಸಮಾಜದ ದಿಕ್ಕನ್ನು ಬದಲಾಯಿಸುವ ದಿಕ್ಸೂಚಿಯಾಗಿದೆ. ಆದರೆ ದಿಕ್ಕು ತಪ್ಪಿಸುವ ಹೋರಾಟಗಳನ್ನು ನೋಡಿ ನೋಡಿ ಜನ ಬೇಸರಕ್ಕೆ ಒಳಗಾಗಿದ್ದಾರೆ. ರೈತರ ಸಮಸ್ಯೆ ಎಂದು ಮುಗಿಯದ ಹೋರಾಟ. ರೈತರಿಗೆ ವರ್ಷವಿಡಿ ಒಂದಲ್ಲ ಒಂದು ಕೆಲಸ ಜಮೀನುಗಳಲ್ಲಿ ಇರುತ್ತದೆ ಆತ ಹೋರಾಟ ಮಾಡುತ್ತಾ ಇದ್ದರೆ ಅವನ ಜಮೀನು ಹಾಳಾಗುತ್ತದೆ. ಅದಕ್ಕಾಗಿ ಆತ ಸಾಮೂಹಿಕವಾಗಿ ಹೋರಾಟಗಳಲ್ಲಿ ಭಾಗವಹಿಸುವುದಿಲ್ಲ ಒಂದಷ್ಟು ಜನ ಒಳ್ಳೆಯ ಭಾವನೆಯಿಂದ ಹೋರಾಟಗಳನ್ನು ಕಟ್ಟಿದರೂ ಜನರು ಹೋರಾಟಗಳಿಗೆ ಬಾರದಿದ್ದಾಗ ಹೋರಾಟಗಾರ ಹೋರಾಟ ದಿಕ್ಕನ್ನು ಬದಲಾಯಿಸುತ್ತಾನೆ. ಪ್ರತಿ  ಸಂದರ್ಭದಲ್ಲಿಯೂ ರೈತ ಹೋರಾಟಗಳು ಹೀಗೆ ಆಗುತ್ತಾ ಬಂದಿದೆ ಒಂದಷ್ಟು ಕಾರ್ಮಿಕರ ಹೋರಾಟಗಳು ಯಶಸ್ವಿಯಾಗುತ್ತಿವೆ. ಆದರೆ ರೈತ ಹೋರಾಟಗಳು ನಿರಾಸೆಯನ್ನು ಹುಟ್ಟಿಸುತ್ತದೆ.
 ಪ್ರಜಾಪ್ರಭುತ್ವದಲ್ಲಿ ಹೋರಾಟಗಳ ವಿಫಲತೆ ಮತ್ತು ವಿಭಾಗವಾಗುವಿಕೆಯಲ್ಲಿ  ಇರುವ ಕಾರಣಗಳನ್ನು ಮೊದಲು ಹುಡುಕಿಕೊಳ್ಳಬೇಕು. ಹೋರಾಟಗಳ ಮೂಲಕ ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗಬೇಕೆನ್ನುವ ಮನಸ್ಥಿತಿಯನ್ನು ಇಟ್ಟುಕೊಂಡು ಹೋರಾಟವನ್ನು ಪ್ರಾರಂಭಿಸಿದರೆ ಆ ಹೋರಾಟಕ್ಕೆ ನ್ಯಾಯ ಕೊಡಲು ಸಾಧ್ಯವಿಲ್ಲ. ಹಾಗೆಂದು ಹೋರಾಟವನ್ನು ತಿಂಗಳು ವರ್ಷವಿಡಿ ಮಾಡುತ್ತಿದ್ದರೆ ಆತ ತನ್ನ ಕುಟುಂಬ ನಿರ್ವಹಣೆಗೆ ಏನು ಮಾಡುತ್ತಿದ್ದಾನೆ ಎನ್ನುವ ಪ್ರಶ್ನೆ ಬರುತ್ತದೆ. ಹಣ ಉಳ್ಳವರು ಯಾರು ಹೋರಾಟ ಮಾಡಲು ಬರುವುದಿಲ್ಲ. ಹೋರಾಟಗಳು ನೋವುಂಡ ಹೃದಯಗಳಿಂದ ಮಾನವೀಯತೆ ಮತ್ತು ಮನುಷ್ಯತ್ವದಿಂದ ಹುಟ್ಟಿಕೊಳ್ಳಬೇಕು. ನಾನು ಎನ್ನುವ ಅಹಂಕಾರದಿಂದ,ಹೋರಾಟದಿಂದ ತಾನು ಲಾಭ ಪಡೆಯಬೇಕು ಎನ್ನುವ ಭಾವನೆಯಿಂದ ಹೋರಾಟಗಳನ್ನು ಕಟ್ಟಿದರೆ ಆ ಹೋರಾಟಗಳು ಒಂದು ದಿನ ತನ್ನ ಉದ್ದೇಶದಿಂದ ಮಾರ್ಗ ಬದಲಿಸಿ , ಸಾಮಾಜಿಕ ನ್ಯಾಯವನ್ನು ನೀಡದೆ ವಿಫಲವಾಗುತ್ತದೆ ಇಂತಹ ವಿಫಲತೆಗಳು ಜನರನ್ನು ಹೋರಾಟಗಳಿಂದ ದೂರ ಹೋಗುವಂತೆ ಮಾಡಿದೆ. ಹೋರಾಟ ಮತ್ತು ಹಣಕಾಸು ಪರಿಸ್ಥಿತಿಗಳು ಒಂದಕ್ಕೊಂದು ಸಂಬಂಧವನ್ನು ಹೊಂದಿದೆ. ಹೋರಾಟಕ್ಕೆ ಮತ್ತು ರಾಜಕಾರಣಕ್ಕೆ ಹಣದ ಅಗತ್ಯವಿದೆ ಈ ಹಣ ಪ್ರಾಮಾಣಿಕತೆಯಿಂದ ಬಾರದೇ ಇದ್ದಾಗ ಹೋರಾಟಗಳು ದಾರಿ ತಪ್ಪುತ್ತದೆ ಮತ್ತು ಅನ್ಯಾಯದ ಮಾರ್ಗಗಳನ್ನು ಹಿಡಿಯುತ್ತದೆ ಸಮಾಜ ಆ ಸಂದರ್ಭದಲ್ಲಿ ತನ್ನ ಮೂಗಿನ ನೇರಕ್ಕೆ ವಿಚಾರ ಮಾಡುವ ಜನರು ಪ್ರತಿಯೊಂದು ರಲ್ಲೂ ತನ್ನ ಲಾಭವನ್ನು ನಿರೀಕ್ಷೆ ಮಾಡುತ್ತಾ ಹೋರಾಟಗಾರರೂ ಸಹ ತಮ್ಮ ಲಾಭಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಎಂದುಕೊಳ್ಳುತ್ತಾರೆ. ಇಂಥ ಒಂದು ಅಪಾಯಕಾರಿ ಸ್ಥಿತಿಯಲ್ಲಿ ಇವತ್ತು ನಾವಿದ್ದೇವೆ.
 ಇನ್ನು ಜನಸಾಮಾನ್ಯರ ಪರಿಸ್ಥಿತಿಗೆ ಬಂದರೆ ಜನಸಾಮಾನ್ಯರು ತಮ್ಮ ವೈಯಕ್ತಿಕ ಬದುಕುಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ ಇಂದಿಗೂ ಸಹ ಜನಸಾಮಾನ್ಯರಿಗೆ ಆರ್ಥಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ತಮ್ಮ ಕುಟುಂಬ ನಿರ್ವಹಣೆಯ ಸಮಸ್ಯೆ ಗಂಭೀರವಾದಾಗ ಸಾಮಾಜಿಕ ಸಮಸ್ಯೆಗಳ ಬಗ್ಗೆ ಸ್ಪಂದಿಸುವ ಮನಸ್ಥಿತಿಯನ್ನು ಜನರು ಕಳೆದುಕೊಳ್ಳುತ್ತಾರೆ. ಹೊಟ್ಟೆ ಬಟ್ಟೆಯ ಸಮಸ್ಯೆಯೊಂದಿಗೆ ನಾನು ಸಮಾಜದಲ್ಲಿ ಬೆಳೆಯಬೇಕು, ಗುರುತಿಸಿಕೊಳ್ಳಬೇಕು, ಶ್ರೀಮಂತನಾಗಬೇಕು ಎನ್ನುವ ಭಾವನೆಯಲ್ಲಿ ಪ್ರತಿದಿನವನ್ನು ಪ್ರತಿ ಕ್ಷಣವನ್ನು ಹಣದ ಲೆಕ್ಕದಲ್ಲಿ ಚಿಂತನೆ ಮಾಡುತ್ತಾ, ಹೋರಾಟವನ್ನು ತಮ್ಮ ಮನಸ್ಸಿಗೆ ತಕ್ಕ ಹಾಗೆ ಆಲೋಚಿಸುತ್ತಾರೆ.
 ಹೋರಾಟ ಎನ್ನುವುದು ಸಾಮಾಜಿಕ ಬದಲಾವಣೆಯ ಒಂದು ಅಂಗ. ಸಮಾಜದ ಬದಲಾವಣೆ ಮತ್ತು ಸುಧಾರಣೆಯ ಹೊಣೆ ಹೊತ್ತ ರಾಜಕಾರಣಿಗಳು ಹೋರಾಟಗಳನ್ನು ಹತ್ತಿಕ್ಕುತ್ತಾ ರಾಜಕಾರಣವನ್ನು ಮಾಡುತ್ತಾರೆ ಜನ ರಾಜಕಾರಣಿಗಳನ್ನು ನಂಬಿದಂತೆ ಹೋರಾಟಗಾರರನ್ನು ನಂಬೋದಿಲ್ಲ. ಕಾರಣ ಹೋರಾಟಗಾರನಿಗೆ ಅಧಿಕಾರ ಇಲ್ಲ ಎನ್ನುವ ಭಾವನೆ. ಹಾಗೆಂದು ಅಧಿಕಾರ ಇರುವ ರಾಜಕಾರಣಿಗಳು ಜನರಿಗೆ ನ್ಯಾಯ ಕೊಟ್ಟಿದ್ದಾರೆ ಕೇಳಿದರೆ ಯಾವ ರೀತಿಯಲ್ಲಿಯೂ ನ್ಯಾಯ ನೀಡಲು ಆಗುತ್ತಿಲ್ಲ. ಆದರೂ ಜನರ ನಂಬಿಕೆ ರಾಜಕಾರಣಿಗಳ ಮೇಲಿದೆ. ಇದೇ ರಾಜಕಾರಣಿಗಳ ಬಂಡವಾಳವಾಗಿದೆ.

Post a Comment

Previous Post Next Post