ನಿಂತು ನೋಡು ಜಗವೆಲ್ಲ ಭ್ರಮೆಯ ಗೂಡು.
ಇತ್ತೀಚಿಗೆ ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಾಮಾನಗಳನ್ನು ನೋಡಿದಾಗ ನೀವು ಮೌನಕ್ಕೆ ಜಾರಿಲೇಬೇಕಾಗುತ್ತದೆ .ಏಕೆಂದರೆ ಯಾರದೋ ಹಿತಾಸಕ್ತಿಗೆ ಇನ್ಯಾರನ್ನೋ ಬಲಿ ಕೊಡುವ ವ್ಯವಸ್ಥೆ ಹಿಂದೆಯೂ ಇತ್ತು ಈಗಲೂ ಅದು ಮುಂದುವರಿದಿದೆ.
ಕುರಿ ಕೋಳಿಗಳ ಬಲಿ ನೀಡಿ ದೇವರ ಹೆಸರಿನಲ್ಲಿ ಮೌಲ್ಯವನ್ನು ಬಿತ್ತಿ ಬೆಳೆ ತೆಗೆಯುವ ಮಂದಿ ಈಗ ವ್ಯಾಪಾರಿಕರಣದ ಉತ್ತುಂಗದಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಒಂದು ಜಾಹೀರಾತಿನಿಂದ ಹಿಡಿದು, ಪ್ರಪಂಚದಲ್ಲಿ ನಡೆಯುತ್ತಿರುವ ಯುದ್ದಗಳನ್ನು ಕಂಡರೆ ಇಲ್ಲಿ ಮನುಷ್ಯ ದೇಶ ಭಾಷೆ, ವಿಧ ಹಿತಾಸಕ್ತಿಗಳ ಹೆಸರಿನಲ್ಲಿ ಬೇರೆಯವರನ್ನು ಬಲಿಕೊಡುವ ವ್ಯವಸ್ಥೆ ನಡೆಯುತ್ತಿದೆ. ಅದರಲ್ಲಿ ಭಯೋತ್ಪಾದನೆಯು ಒಂದು. ರಷ್ಯಾ ಯುಕ್ರೇನ್ ಯುದ್ದಗಳ ನಡುವೆ , ಈಗ ಇಸ್ರೇಲ್ ಇರಾನ್ ನಡುವೆ ಪ್ರಾರಂಭವಾಗಿದೆ. ಈ ನಡುವೆ ಅತಿ ವೇಗವಾಗಿ ಯುದ್ಧ ಪ್ರಾರಂಭ ಮಾಡಿ, ವೇಗವಾಗಿ ಮುಗಿಸಿದ್ದು ಭಾರತ. ಈ ವಿಚಾರದಲ್ಲಿ ನರೇಂದ್ರ ಮೋದಿ ಮತ್ತು ಅವರ ಟೀಮಿಗೆ ಧನ್ಯವಾದಗಳು ಹೇಳಬೇಕು. ಅದನ್ನು ಬಿಟ್ಟು ಅದರಲ್ಲೂ ರಾಜಕೀಯ ಮಾಡಿದ ದೇಶದ್ರೋಹಿಗಳನ್ನು ನೋಡಿದರೆ ಮೈಯೆಲ್ಲಾ ಉರಿಯುತ್ತದೆ. ಒಂದು ಯುದ್ಧ ದೀರ್ಘಾವಧಿಯಾದಾಗ ಅದರ ಪರಿಣಾಮಗಳನ್ನು ದೇಶದ ಜನರೇ ಅನುಭವಿಸಬೇಕಾಗುತ್ತದೆ. ಈ ಕನಿಷ್ಠ ಜ್ಞಾನವಿಲ್ಲದ ಭಾರತದ ಅನ್ನ ತಿನ್ನುತ್ತಾ ಭಾರತಕ್ಕೆ ದ್ರೋಹ ಬಗೆಯುವ ಮನಸ್ಥಿತಿಯವರು ಭಾರತದಲ್ಲಿರುವಷ್ಟು ಪ್ರಪಂಚದ ಯಾವ ದೇಶದಲ್ಲೂ ಇರಲ್ಲಿಕ್ಕಿಲ್ಲ.ಇಂತಹ
ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆಯ ಭಯವಿಲ್ಲ. ಆದ್ದರಿಂದ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಮೊದಲು ವಾಕ್ ಸ್ವಾತಂತ್ರ್ಯದ ಹಕ್ಕು ದುರುಪಯೋಗ ಆಗುತ್ತಿರುವ ಬಗ್ಗೆ ಕಾನೂನು ತಿದ್ದುಪಡಿಗಳಾಗಬೇಕು. ರಾಜಕಾರಣಿಗಳ ಮೇಲಿನ ಆರೋಪಗಳಿಗೆ ಕನಿಷ್ಠ ಐದು ವರ್ಷದ ಒಳಗೆ ವಿಚಾರಣೆ ನಡೆದು ಶಿಕ್ಷೆ ಪ್ರಕಟವಾಗಬೇಕು. ಇಂಥ ನ್ಯಾಯಾಂಗ ವ್ಯವಸ್ಥೆ ದೇಶದಲ್ಲಿ ಬರಬೇಕಾಗಿದೆ. ಈ ದೇಶದ ರಾಜಕಾರಣಿಗಳೇ ಈ ದೇಶಕ್ಕೆ ಮಾರಕವಾಗುತ್ತಿದ್ದಾರೆ. 524 ಸಂಸ್ಥಾನಗಳನ್ನು ಒಗ್ಗೂಡಿಸಿ ಜನತಂತ್ರ ವ್ಯವಸ್ಥೆಯನ್ನು ತಂದ ಭಾರತದಲ್ಲಿ ಈಗ 524 ಸಂಸತ್ ಸದಸ್ಯರು ರಾಜರುಗಳಂತೆ ಮೆರೆಯುತ್ತಿದ್ದಾರೆ.ಇದು ಪ್ರಜಾಪ್ರಭುತ್ವದೊಳಗಿನ ರಾಜಪ್ರಭುತ್ವ ಇದನ್ನು ಕೊನೆಗಾಣಿಸಲು ಜನರ ಒಗ್ಗಟ್ಟನ್ನು ರಾಷ್ಟ್ರೀಯವಾಗಿ ತರಬೇಕು. ಆದರೆ ರಾಷ್ಟ್ರೀಯತೆಯ ಭಾವನೆ ಇಲ್ಲದ ಜನರ ಸಂಖ್ಯೆ ಸರಿಸುಮಾರು ಇಪ್ಪತ್ತು ಪರ್ಸೆಂಟ್ ಇಂದ 30% ಇರಬಹುದು ಎಂದು ಅಂದಾಜಿಸಲಾಗಿದೆ. ಇದೊಂದು ದುರಂತ.
Tags
ಶಿವಮೊಗ್ಗ