ಹಿಂದೂ ಧರ್ಮದಲ್ಲಿ ಕ್ಷತ್ರಿಯ ಗುಣದ ಕೊರತೆ
ಹಿಂದೂ ಧರ್ಮದಲ್ಲಿ ಕ್ಷತ್ರಿಯ ಗುಣ ಕೊರತೆ ಇದೆ ಎಂದು ವಿಶ್ವ ನಿಸರ್ಗ ಪುನರ್ ನಿರ್ಮಾಣ ವೇದಿಕೆಯ ಅಧ್ಯಕ್ಷರಾದ ಗಣೇಶ್ ಬೆಳ್ಳಿಯವರು ತಿಳಿಸಿದ್ದಾರೆ. ಸಾಮಾಜಿಕ ಸಂಘರ್ಷದಲ್ಲಿ ಮನುಷ್ಯ ಬೇರೆಯವರ ಅಡಿಯಾಳಾಗಿ ಬದುಕುವ ಜೀತ ಪದ್ದತಿಯ ಮನಸ್ಥಿತಿ ಜನರದ್ದಾಗಿರುತ್ತದೆ. ಇಡೀ ಸಮುದಾಯ ಮನುಷ್ಯ ಜನಾಂಗದ ಪ್ರಾರಂಭದಿಂದ ಬಲಿಷ್ಠರ ಆಳ್ವಿಕೆಯಲ್ಲಿ ದುರ್ಬಲರ ಜೀತ ಪದ್ಧತಿ ಮುಂದುವರೆದಿದೆ. ಸ್ವತಂತ್ರ ಮನೋಭಾವನೆಯ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದು ಅನಿವಾರ್ಯವಾದರೂ ಸಮಾಜದಲ್ಲಿ ಅಂತಹ ಬೆಳವಣಿಗೆಗೆ ಅವಕಾಶಗಳಿಲ್ಲ. ನಮ್ಮ ಶಿಕ್ಷಣ ವ್ಯವಸ್ಥೆಯು ಸ್ವತಂತ್ರ ಮನೋಭಾವನೆಯನ್ನು ಬೆಳೆಸುವ ರೀತಿ ಯಲ್ಲಿ ಇಲ್ಲವಾಗಿದೆ. ಹಿಂದೂ ಧರ್ಮದಲ್ಲಿ ರಾಜರುಗಳ ಆಡಳಿತದಲ್ಲಿ ಪ್ರಜೆಗಳು ಮೌನವಾಗಿ ಎಲ್ಲವನ್ನು ಸಹಿಸಿಕೊಳ್ಳುತ್ತಾ ಬದುಕುತ್ತಾ ಬಂದಿದ್ದಾರೆ. ಆ ಮನಸ್ಥಿತಿ ಜೀನ್ಸ್ ಮೂಲಕ ಮುಂದುವರಿಯುತ್ತ ಬಂದಿದೆ. ದುಷ್ಟರನ್ನು ಕಂಡರೆ ದೂರ ಇರು. ಬಡವನ ಸಿಟ್ಟು ದವಡೆಗೆ ಮೂಲ. ಹೀಗೆ ಅನೇಕ ಗಾದೆ ಮಾತುಗಳು ಬಲಿಷ್ಠರನ್ನು ಎದುರು ಹಾಕಿಕೊಳ್ಳಬಾರದು ಎನ್ನುವ ಮನಸ್ಥಿತಿಯಲ್ಲಿ ಇದ್ದಿದ್ದರಲ್ಲಿ ಸುಖ ಪಡಬೇಕು ಹಾಸಿಗೆ ಇದ್ದಷ್ಟು ಕಾಲು ಚಾಚು ಹೀಗೆ ಇಡೀ ಸಮಾಜವನ್ನ ದುರಾಸೆಯಿಂದ ಮುಕ್ತವಾಗಿಸುವ ಮನಸ್ಥಿತಿಯಲ್ಲಿ ಬೆಳೆದುಬಂದಿದೆ. ಇದರ ಪರಿಣಾಮ ಮನುಷ್ಯ ಮಾನಸಿಕ ಸದೃಢನಾದರೆ ದುರ್ಬಲನಾಗುತ್ತಾ ಸಾಗಿದ್ದಾನೆ. ಪ್ರತಿಯೊಂದು ಧರ್ಮವು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ.
ಹಾಗೆಯೇ ಹಿಂದೂ ಧರ್ಮ ತನ್ನ ವೈಶಿಷ್ಟ್ಯತೆಗಳ ನಡುವೆ ಇರುವ ದೊಡ್ಡದೌರ್ಬಲ್ಯವೆಂದರೆ ಕ್ಷಾತ್ರಿಯ ಗುಣ ಧರ್ಮದ ಕೊರತೆ. ಇಲ್ಲಿ ಚಾತುರ್ವರ್ಣ ಪದ್ಧತಿಯಲ್ಲಿ ಕೆಲಸವನ್ನು ವಿಭಾಗ ಮಾಡಿದ ಕಾರಣ, ಕ್ಷಾತ್ರೀಯ ಗುಣ ಧರ್ಮ ಸೈನಿಕರಲ್ಲಿ ಮಾತ್ರ ಉಳಿಯಿತ್ತೆ, ವಿನಾ ಉಳಿದ ಯಾವ ವರ್ಗಗಳು ಕ್ಷತ್ರಿಯ ಗುಣ ಧರ್ಮವನ್ನು ಬೆಳೆಸಿಕೊಳ್ಳಲಿಲ್ಲ. ಪರಿಣಾಮವಾಗಿ ಬ್ರಾಹ್ಮಣ ವೈಶ್ಯ ಶೂದ್ರ ರಾಜ ಹೀಗೆ ಎಲ್ಲರನ್ನೂ ಸೈನಿಕರೇ ಕಾಪಾಡಬೇಕು ಎನ್ನುವ ಮನಸ್ಥಿತಿ ಬೆಳೆಸಿಕೊಳ್ಳುತ್ತಾ ಸಮಾಜ ಬೆಳೆದು ಬಂತು.
ಇದರ ಪರಿಣಾಮ ಮಹಾಭಾರತದಲ್ಲಿಯೂ ಸಹ ಪಾಂಡವ ಕೌರವರ ನಡುವೆ ಯುದ್ಧ ನಡೆಯುವಾಗಲೂ ಕೃಷಿಕರು ಕೃಷಿ ವ್ಯವಸಾಯ ಗಳನ್ನು ಮಾಡುತ್ತಿದ್ದರಂತೆ. ಕೌರವ ಪಾಂಡವರ ಯುದ್ಧದ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಈಗಲೂ ಹಾಗೆ ಎಲ್ಲರೂ ಯುದ್ಧ ಆಗಬೇಕು ಎನ್ನುತ್ತಾರೆ. ಯುದ್ಧ ಭೂಮಿಯಲ್ಲಿ ಯೋಧರಾಗಲು ಯಾರು ಸಿದ್ದರಿಲ್ಲ. ಹಿಂದೂ ಧರ್ಮದಲ್ಲಿ ಕ್ಷತ್ರಿಯ ಗುಣದ ಕೊರತೆಗೆ ಅಹಿಂಸಾವಾದ ಮತ್ತು ದಾಸ ಸಾಹಿತ್ಯಗಳು ಕಾರಣವಾದವು. ಧಾರ್ಮಿಕ ಭಕ್ತಿ ಮಾರ್ಗದಲ್ಲಿ
ಯಾವುದೇ ವ್ಯಕ್ತಿಯನ್ನು ಸಂಪೂರ್ಣ ಬದಲಾಯಿಸಲು ಸಾಧ್ಯವಿಲ್ಲ. ವ್ಯಕ್ತಿ ಚಿಂತನೆಗಳಲ್ಲಿ ಒಂದಷ್ಟುಅವನ ತಂದೆ ತಾಯಿಗಳಜೀನ್ಸ್ ಮೂಲಕ ವಂಶ ಪಾರಂಪರ್ಯವಾಗಿ ಬರುತ್ತದೆ .ಅದರೊಂದಿಗೆ ಬಾಲ್ಯದಲ್ಲಿ ಅವನು ಬೆಳೆಯುವಾಗ ಅವನ ಮನಸ್ಸಿನ ಮೇಲೆ ಆದ ನೋವು, ನಲಿವುಗಳು, ಸಮಾಜವನ್ನು ಆತನು ನೋಡುವ ದೃಷ್ಟಿಕೋನದ ಮೇಲೆ ,ಮನಸ್ಸಿನ ಮೇಲೆ ಆಗುವ ಅಘಾತಗಳ ಮೇಲೆ ನಿರ್ಧಾರವಾಗುತ್ತದೆ. ನಮ್ಮಲ್ಲಿ ಮಕ್ಕಳನ್ನು ಅತಿ ಜಾಗರೂಕತೆಯಲ್ಲಿ ಬೆಳೆಸುತ್ತಾ, ನೋವಿನ ಪರಿಚಯವೇ ಇಲ್ಲದಂತೆ ಮಾಡಿದಾಗ ಅವರು ಸಮಾಜದಲ್ಲಿ ಅನಿರೀಕ್ಷಿತ ಪರಿಸ್ಥಿತಿಗಳನ್ನು ಎದುರಿಸುವಲ್ಲಿ ವಿಫಲರಾಗುತ್ತಾರೆ.
ಹಿಂದೂ ಧರ್ಮದಲ್ಲಿ ಮಕ್ಕಳನ್ನು ಸಬಲರನ್ನಾಗಿ ಮಾಡುವುದಕ್ಕಿಂತ ಹೆಚ್ಚಾಗಿ ದುರ್ಬಲರನ್ನಾಗಿ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಸಾವು ಎನ್ನುವುದು ಹುಟ್ಟಿದ ಪ್ರತಿಯೊಬ್ಬರಿಗೂ ನಿಶ್ಚಿತವಾದ ಮೇಲೆ ಸಾವಿನ ಭಯವಿಲ್ಲದೆ ಬದುಕಬೇಕು . ಅಂಜಿಕೆ ಭಯದಲ್ಲಿ ಬದುಕುವವರು ಪರಿಸ್ಥಿತಿಯನ್ನು ಎದುರಿಸುವಲ್ಲಿ ವಿಫಲರಾಗುತ್ತಾರೆ. ಅತಿ ಜೋಪಾನದಲ್ಲಿ ಮಕ್ಕಳನ್ನು ಬೆಳೆಸಿದರೆ ಮಕ್ಕಳು ಹೇಡಿತನವನ್ನು ಬೆಳೆಸಿಕೊಳ್ಳುತ್ತಾರೆ. ಭಾರತದ ಮೇಲೆ ದಾಳಿಗಳನ್ನು ಗಮನಿಸಿದರೆ ಇಲ್ಲಿ ಶತ್ರುವನ್ನು ಎದುರಿಸುವುದಕ್ಕಿಂತ ಜೀವವಿದ್ದರೆ ಬೇಡಿ ತಿನ್ನಬಹುದು ಎನ್ನುವ ನಾಡು ನುಡಿಗೆ ಸಮಾಜ ಬಂದಿದೆ. ಶ್ರೀಮಂತರ ದಬ್ಬಾಳಿಕೆ ,ಪರಕೀಯರ ಆಕ್ರಮಣಗಳಿಗ ಒಳಗಾಗಿದ್ದು ನಮ್ಮ ಅಹಿಂಸಾ ವಾದ ಮತ್ತು ಭಕ್ತಿ ಮಾರ್ಗದ ಪ್ರಭಾವ.
ಭಕ್ತಿ ಮಾರ್ಗದಲ್ಲಿ ದೇವರಿಗೆ ಶರಣಾಗತರಾದರೆ ದೇವರು ಎಲ್ಲವನ್ನು ನೋಡಿಕೊಳ್ಳುತ್ತಾನೆ ಎನ್ನುವ ಮಾತು ವ್ಯಕ್ತಿಯ ಮಾನಸಿಕ ಶಕ್ತಿಯನ್ನು ಕುಗ್ಗಿಸಿತ್ತು. ಬರು ಬರುತ್ತಾ ಆತ್ಮಶಕ್ತಿಯ ಹೆಚ್ಚಿಸಿಕೊಳ್ಳುವಿಕೆಯ ಬದಲು ಆತ್ಮಶಕ್ತಿರಹಿತ ಜಡ ವ್ಯಕ್ತಿಗಳಾದೆವು.
ಮನುಷ್ಯನ ಮನಸ್ಸು ಸಹಜವಾಗಿ ಶ್ರಮ ಪಡುವುದಕ್ಕೆ ಸಾಧನೆ ಮಾಡೋದಕ್ಕೆ ಇಷ್ಟಪಡುವುದಿಲ್ಲ. ಸುಲಭವಾಗಿ ತಗ್ಗು ಪ್ರದೇಶಗಳ ಕಡೆ ನೀರು ಹರಿಯುವಂತೆ ಸುಲಭದಲ್ಲಿ ಎಲ್ಲವನ್ನು ಪಡೆಯುವ ಅಥವಾ ಕನಿಷ್ಠ ಸುಖದಲ್ಲಿ ತೃಪ್ತಿಹೊಂದುವ ಮನಸ್ಥಿತಿ ಮನುಷ್ಯನದ್ದಾಗಿದೆ. ಇಂಥ ಮನಸ್ಥಿತಿಗೆ ಆಧ್ಯಾತ್ಮಿಕ ಭಕ್ತಿ ಮಾರ್ಗ ಪ್ರೇರಕವಾಯಿತು.
ಮುಂದೆ ದಾಸ ಸಾಹಿತ್ಯದ ಸಂದರ್ಭದಲ್ಲಿ ಇದು ಸಂಪೂರ್ಣ ದಾಸ್ಯವೇ ಆಯಿತು. ಜೈನ ಬೌದ್ಧ ಧರ್ಮಗಳು ಬಂದಾಗ ಹೇಗೆ ಸಸ್ಯಾಹಾರ ಶ್ರೇಷ್ಠ ಆಯಿತೋ, ಹಾಗೆ ಅಹಿಂಸವಾದವೂ ಮಾನ್ಯತೆ ಪಡೆಯಿತು. ಇದರ ಪರಿಣಾಮ ಸಕಲ ಜೀವಿಗಳಿಗೂ ಬದುಕುವ ಹಕ್ಕಿದೆ. ಬೇರೆಯವರಿಗೆ ನೋವು ಕೊಡುವುದು ಪಾಪ ಕಾರ್ಯ ಎನ್ನುವ ಕಲ್ಪನೆಗಳು ಹಿಂದೂ ಧರ್ಮದ ಶ್ರೇಷ್ಠತೆಯನ್ನು ಎತ್ತಿ ಹಿಡಿದರೂ ಇನ್ನೊಂದು ಭಾಗದಲ್ಲಿ ತನ್ನ ಆತ್ಮ ರಕ್ಷಣೆಗಾಗಿ, ತನ್ನ ಕುಟುಂಬದ, ತನ್ನ ದೇಶದ ರಕ್ಷಣೆಗಾಗಿ ಕ್ಷತ್ರಿಯ ಗುಣ ಧರ್ಮಕ್ಕೆ ಹೋಗದೆ ರಕ್ಷಣೆಗಾಗಿ ಬೇರೆಯವರನ್ನು ಮೊರೆ ಇಡುವ ಮನಸ್ಥಿತಿಗೆ ಸಮಾಜ ಬಂದು ನಿಂತಿತು. ಮುಂದಿನ ದಿನಗಳಲ್ಲಿ ಬುದ್ಧಿವಂತಿಕೆಯಲ್ಲಿ ಬದುಕುವುದೇ ಸಾಮಾಜಿಕ ಧರ್ಮವಾಯಿತು. ಈಗಲೂ ಹಿಂದೂ ಸಮಾಜ ಎಚ್ಚೆತ್ತುಕೊಂಡಿಲ್ಲ. ಕ್ಷತ್ರಿಯ ಗುಣಗಳನ್ನು ಅಳವಡಿಸಿಕೊಳ್ಳುತ್ತಿಲ್ಲ. ಪ್ರತಿಯೊಬ್ಬರು ಬುದ್ಧಿವಂತಿಕೆಯಲ್ಲಿ ಬದುಕುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಅಹಿಂಸೋ ಪರಮಧರ್ಮ ಎನ್ನುವ ಸಿದ್ಧಾಂತ ಹಿಂದೂ ಧರ್ಮ ಅಳವಡಿಸಿಕೊಂಡಿದೆ. ಬೌದ್ಧ ಧರ್ಮ ಯಾವ್ಯಾವ ದೇಶಗಳಿಗೆ ಹೋಯಿತು ಆ ದೇಶಗಳಲ್ಲಿ ಆ ಧರ್ಮದ ಬೋಧನೆಯಂತೆ ಬದುಕುತ್ತಿಲ್ಲ. ಆದರೆ ಬೌದ್ಧ ಧರ್ಮ ನಮ್ಮಲ್ಲಿ ಇಲ್ಲದಿದ್ದರೂ ಹಿಂದುಗಳಾದ ನಾವುಗಳು ಅದರ ತತ್ವ ಸಿದ್ಧಾಂತದಲ್ಲಿ ಬದುಕುತ್ತಿದ್ದೇವೆ. ಇನ್ನಾದರೂ ಹಿಂದೂ ಸಮಾಜ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹಿಂದೂಮುಖಂಡರುಗಳು ಹೇಳುತ್ತಲೇ ಇದ್ದಾರೆ. ಆದರೆ ಹಿಂದುಗಳಲ್ಲಿಸಾಮಾಜಿಕ ಜಾಗ್ರತಿ ಆಗುತ್ತಿಲ್ಲ ಎನ್ನುವುದು ಬೇಸರದ ಸಂಗತಿ.
Tags
ಶಿವಮೊಗ್ಗ