ದೇಶದಲ್ಲಿ ಜಾತಿಗಣತಿ ಜನಗಣತಿಗಿಂತ ಮೊದಲು ಆರ್ಥಿಕ ಗಣತಿ ಮಾಡಬೇಕಾಗಿದೆ ಗಣೇಶ್ ಬೆಳ್ಳಿ

ಜಾತಿಗಣತಿ  ಜನಗಣತಿಯ ನಡುವೆ ಜನರ ಆರ್ಥಿಕ ಗಣತಿಯೂ ಆಗಬೇಕಾಗಿದೆ.
    ಸರ್ಕಾರ ಜಾತಿಗಣತಿ ಜನಗಣತಿಯ ನಡುವೆ ಜನರಲ್ಲಿ ಗೊಂದಲವನ್ನು ಸೃಷ್ಟಿಸುತ್ತಿದೆ. ಇಲ್ಲಿ ಮೊದಲು ಜಾತಿಗಣತಿ, ಜನಗಣತಿಗಿಂತ ಜನರ ಆರ್ಥಿಕ ಗಣತಿಯನ್ನು ಮಾಡಬೇಕಾಗಿದೆ. ಏಕೆಂದರೆ ರಾಜಕೀಯ ನಾಯಕರಿಂದ ಹಿಡಿದು ಸಾಮಾನ್ಯ ಜನರ ವರೆಗೂ ಪ್ರಾಮಾಣಿಕ ದುಡಿಮೆಯ ಮಾರ್ಗಗಳು ಇಲ್ಲವಾಗಿದ್ದು, ಸರ್ಕಾರಕ್ಕೆ ಲೆಕ್ಕ ಕೊಡದ ಅಕ್ರಮ ಹಣ ಸಂಪಾದನೆ, ಕಾನೂನು ಬಾಹಿರ ಕೆಲಸಗಳು, ಜನರನ್ನು ಶ್ರೀಮಂತರನ್ನಾಗಿ ಮಾಡುತ್ತಿದೆ. ಅದನ್ನು ನೋಡಿ ಸಾಮಾನ್ಯ ಜನರು ಸಹ ಪ್ರಾಮಾಣಿಕ ದುಡಿಮೆಯಿಂದ ಶ್ರೀಮಂತರಾಗಲು ಸಾಧ್ಯವಿಲ್ಲವೆಂದು ಅಕ್ರಮ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಆಳುವವನಲ್ಲಿ ಪ್ರಾಮಾಣಿಕತೆ ಇಲ್ಲದಿದ್ದರೆ, ಯಾವ ಆಡಳಿತ ಯಂತ್ರವು ಪ್ರಾಮಾಣಿಕವಾಗಿ ಕೆಲಸ ಮಾಡುವುದಿಲ್ಲ. ರಾಜ್ಯದಲ್ಲಿ 40% ಸುದ್ದಿಯಾಗಿ ಸರ್ಕಾರ ಬಿದ್ದು ಹೋಗಿ, ಈಗ 60% 80% ಸರ್ಕಾರ ಬಂದಿದೆ. ಎನ್ನುವ ರಾಜಕಾರಣಿಗಳ,ಸುದ್ದಿ ಮಾಧ್ಯಮಗಳ ಹೇಳಿಕೆಗಳಿಂದ ಸರ್ಕಾರ ಜನರ ಮೇಲೆ ತೆರಿಗೆ ಹೇರಿ ಭ್ರಷ್ಟಾಚಾರದಲ್ಲಿ ಅಕ್ರಮ ಹಣ ಸಂಪಾದನೆ ಮಾಡುವ ವ್ಯವಸ್ಥೆಯಲ್ಲಿ ನಾವು ಅನಿವಾರ್ಯವಾಗಿ ಬದುಕಬೇಕಾಗಿದೆ. ಈ ದೇಶದಲ್ಲಿ 80ರಷ್ಟು ಬಡ ಮಧ್ಯಮ ವರ್ಗದ ಜನರು ಆರ್ಥಿಕ ತೊಳಲಾಟದಲ್ಲಿ ಇದ್ದಾರೆ. ಅವರು ಸಂಘಟಿತರಾಗಿ 20 ಪರ್ಸೆಂಟ್ ಜನರ ಬಂಡವಾಳ ಶಾಹಿ ವ್ಯವಸ್ಥೆಯ ವಿರುದ್ಧ ಹೋರಾಟವನ್ನು ಮಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಮೊದಲು ಪ್ರತಿಯೊಬ್ಬ ಭಾರತೀಯ ಪ್ರಜೆಯ ಆರ್ಥಿಕ ಮೂಲ, ಮತ್ತು ಆರ್ಥಿಕತೆಯ ಸ್ಥಿತಿಯನ್ನು ಲೆಕ್ಕ ಮಾಡಿ ದಾಖಲು ಮಾಡಬೇಕಾದ ಅಗತ್ಯವಿದೆ. ಆದ್ದರಿಂದ ದೇಶದಲ್ಲಿ ಜನರಲ್ಲಿ ಆರ್ಥಿಕ ಗಣತಿಕ್ಕಿಂತ ಹೆಚ್ಚಿನ ಹಣ ಕಂಡುಬಂದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ವ್ಯವಸ್ಥೆ ದೇಶದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ.ಜಾತಿಗಣತಿ  ಜನಗಣತಿಯ ನಡುವೆ ಜನರ ಆರ್ಥಿಕ ಗಣತಿಯೂ ಆಗಬೇಕಾಗಿದೆ.    

Post a Comment

Previous Post Next Post