ಹೊಸನಗರ ವಸವೆ ಗ್ರಾಮದಲ್ಲಿ ಒತ್ತುವರಿ ತೆರವು- ರೈತನಿಗೆ ಅನ್ಯಾಯ -ಇಲಾಖೆಯ ದೌರ್ಜನ್ಯ- ಊರಲ್ಲಿ ಒಗ್ಗಟ್ಟಿನ ಕೊರತೆ.
ಹೊಸನಗರ ತಾಲೂಕು ಜಯನಗರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಸವೆ ಗ್ರಾಮದ ಸರ್ವೇ ನಂಬರ್ 17ರಲ್ಲಿ ಶ್ರೀಧರ ಎನ್ನುವವರ ಅಡಿಕೆ ತೋಟವನ್ನು ಜೆಸಿಬಿ ಮೂಲಕ ಕಿತ್ತುಹಾಕಿದ್ದು, ರೈತ ಮಾಡಿದ ಬೆಳೆಗಳನ್ನು ನಾಶ ಮಾಡಿ, ಪೈಪ್ ಲೈನ್ ಗಳನ್ನು ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರೈತ ಶ್ರೀಧರ್ ಅವರಿಗೆ ಲಕ್ಷಾಂತರ ಹಾನಿಯಾಗಿದ್ದು, ತಾಲೂಕು ದಂಡಾಧಿಕಾರಿಗಳು ರೈತರ ಮೇಲೆ ದಬ್ಬಾಳಿಕೆ ಮಾಡಿದ್ದಾರೆಂದು ಪ್ರತಿಭಟನೆ ನಡೆಸಲಾಗುತ್ತಿದೆ. ಈ ಬಗ್ಗೆ ಈ ಹಿಂದಿನ ದಾಖಲೆಗಳ ಮೇಲೆ ತಾವು ತೆರವುಗೊಳಿಸಿರುವುದಾಗಿ ಕಂದಾಯ ಇಲಾಖೆ ಹೇಳುತ್ತಿದೆ. ಈ ನಡುವೆ ಈ ಪ್ರಕರಣದ ಹಿಂದೆ ಊರಿನ ಒಂದಷ್ಟು ರಾಜಕೀಯ ವಿದ್ಯಾಮಾನಗಳು ವಿರೋಧಿ ಬಣಗಳು ಕಾಣದ ಕೈಗಳು ಕೆಲಸ ಮಾಡಿರುವುದು ಸ್ಪಷ್ಟವಾಗಿದೆ. ಸರ್ವೇ ನಂಬರ್ ೧೭ರಲ್ಲಿ ೩೭ ಎಕರೆ ಗೋಮಾಳ ಜಮೀನಿದ್ದು, ಅದರಲ್ಲಿ ಹತ್ತಕ್ಕೂ ಹೆಚ್ಚು ಜನ ಒತ್ತುವರಿ ಮಾಡಿದ್ದು, ಕೇವಲ ಶ್ರೀಧರ್ ಅವರ ಒತ್ತುವರಿಯನ್ನು ಮಾತ್ರ ತೆರವುಗೊಳಿಸಿರುವುದು ತಾಲೂಕು ದಂಡಾಧಿಕಾರಿಗಳು ರೈತರ ಮೇಲೆ ಮಾಡಿದ ಆಕ್ರಮಣ ಎಂದು ಮಲೆನಾಡು ರೈತ ಹೋರಾಟ ಸಮಿತಿಯ ಅಧ್ಯಕ್ಷರಾದ ತೀ .ನಾ ಶ್ರೀನಿವಾಸ್ ಮತ್ತು ಹೊಸನಗರ ರೈತ ಸಂಘದ ಅಧ್ಯಕ್ಷರಾದ ಮಾಸ್ತಿಕಟ್ಟೆ ರವೀಂದ್ರ ಅವರು ಮಾತನಾಡಿದ್ದಾರೆ.
ರೈತರೆಲ್ಲರೂ ತಮ್ಮ ಖಾತೆಯ ಅಕ್ಕ ಪಕ್ಕ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದು ಮಲೆನಾಡಿನಲ್ಲಿ ಸರ್ವೇಸಾಮಾನ್ಯ. ಈ ಒತ್ತುವರಿಗಳಿಗೆ ಹಕ್ಕುಗಳನ್ನು ನೀಡುತ್ತೇವೆಂದು ನಮ್ಮ ನಾಳುವ ಸರ್ಕಾರಗಳು ಅನೇಕ ರೀತಿಯ ದರಕಾಸು 53,57ಅರ್ಜಿಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳುತ್ತಾ ಬಂದಿದೆ. ಆದರೆರೈತರಿಗೆ ಹಕ್ಕುಗಳನ್ನು ನೀಡುವಲ್ಲಿ ವಿಫಲವಾಗಿದೆ. ಈಗ ಏಕಾಏಕಿ ರೈತರ ಭೂಮಿಯನ್ನು ತೆರ
ಈ ನಡುವೆ ತಾಲೂಕು ದಂಡಾಧಿಕಾರಿಗಳು ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡುತ್ತಾ, ಈಗಾಗಲೇ ಶ್ರೀಧರ್ ಅವರು ಒತ್ತುವರಿ ಮಾಡಿದ ಸ್ಥಳ 2017ರಲ್ಲಿ ಒಮ್ಮೆ ತೆರವು ಆದೇಶ ಆಗಿತ್ತು .ಆಗಲು ತೆರವು ಮಾಡಲಾಗಿತ್ತು. ಇದು ವಸವೆ ಗ್ರಾಮದ ಊರಿನ ರೈತರ ನಡುವಿನ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ತೆರವು ಮಾಡಲಾಗಿದೆ.. ಸರ್ಕಾರಿ ಜಾಗದ ಒತ್ತುವರಿ ಅಕ್ರಮವಾಗಿದ್ದು, ಯಾವುದೇ ರೈತ ಮಾಡಿದರೂ ಅದನ್ನು ತೆರವುಗೊಳಿಸುವ ಮುನ್ನ ನೋಟಿಸ್ ಕೊಡಬೇಕಾದ ಅಗತ್ಯವಿರುವುದಿಲ್ಲ. ಸರ್ಕಾರಿ ಭೂಮಿ ರೈತನಿಗೆ ಮಂಜೂರಾತಿಯಾಗಿದ್ದಲ್ಲಿ ಆಗ ನೋಟಿಸ್ ಕೊಡುವ ಪ್ರಮೇಯ ಬರುತ್ತದೆ. ಇಲ್ಲವಾದಲ್ಲಿ ನೋಟಿಸ್ ಕೊಡುವ ಯಾವುದೇ ಪ್ರಮೇಯ ಇರುವುದಿಲ್ಲವೆಂದು ತಿಳಿಸಿದ್ದಾರೆ.
ಈ ನಡುವೆ ಶ್ರೀಧರ್ ಅವರು ಇದೇ ಸರ್ವೆ ನಂಬರಿನಲ್ಲಿ ನನ್ನಂತೆ ಅನೇಕ ರೈತರು ಒತ್ತುವರಿ ಮಾಡಿದ್ದು, ನನ್ನೊಬ್ಬನ ಒತ್ತುವರಿಯನ್ನು ತೆರವುಗೊಳಿಸುವ ಕ್ರಮದ ಹಿಂದೆ ಊರಿನ ಕೆಲವು ಜನರ ಗ್ರಾಮ ಪಂಚಾಯತಿ ಸದಸ್ಯರು, ಅಧ್ಯಕ್ಷರುಗಳ ರಾಜಕೀಯ ದ್ವೇಷ ಇದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಒಗ್ಗಟ್ಟಿನಲ್ಲಿ ಗೆಲುವು ಒಂಟಿ ಆದರೆ ತೆರವು ಎನ್ನುವ ಘೋಷಣೆಯೊಂದಿಗೆ ಸರ್ಕಾರಿ ಅರಣ್ಯ ಭೂಮಿ ಸಾಗುವಳಿದಾರರ ಒಕ್ಕೂಟದಿಂದ 2024 ಅಕ್ಟೋಬರ್ ನಲ್ಲಿ ಹೊಸನಗರದಲ್ಲಿ ಪ್ರತಿಭಟನಾ ಹೋರಾಟ ನಡೆಸಿದ್ದು, ಅಂದಿನ ಘೋಷಣೆಯಂತೆ ಇಂದು ಶ್ರೀಧರ್ ಮತ್ತು ಊರಿನವರ ನಡುವೆ ಒಗ್ಗಟ್ಟಿಲ್ಲದ ಕಾರಣ ತಾಲೂಕು ಆಡಳಿತಕ್ಕೆ ತೆರವು ಮಾಡುವ ಅವಕಾಶ ಸಿಕ್ಕಂತಾಗಿದೆ. ರೈತರು ತಮ್ಮ ತಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಮರೆತು ಒಗ್ಗಟ್ಟಾಗದೇ ಇದ್ದರೆ ಇಂಥಹ ತೆರವು ಪ್ರಕರಣಗಳು ಪ್ರತಿ ಗ್ರಾಮಗಳಲ್ಲೂ ಮುಂದಿನ ದಿನಗಳಲ್ಲಿ ನಡೆಯುತ್ತದೆ.
ರೈತರು ಈ ವಿಚಾರದಲ್ಲಿ ಎಚ್ಚೆತ್ತು ಕೊಳ್ಳಬೇಕಾಗಿದೆ. ಶ್ರೀಧರ್ ಮತ್ತು ಕುಟುಂಬದವರು ಆಹೋರಾತ್ರಿ ಧರಣಿ ನಡೆಸುತ್ತಿದ್ದು, ತನಗೆ ಅನ್ಯಾಯವಾಗಿದೆ ಎಂದು ಉಳಿದ ರೈತರ ಒತ್ತುವರಿಗಳನ್ನು ತೆರವು ಗೊಳಿಸಬೇಕು ಎಂಬ ಬೇಡಿಕೆ ತನ್ನದಲ್ಲವೆಂದು ತಿಳಿಸಿದರೂ ಸಹಾ ತನಗೆ ಆಗಿರುವ ಹಾನಿಗೆ ತಹಸಿಲ್ದಾರ್ ಅವರೇ ಕಾರಣರಾಗಿದ್ದಾರೆ ಎನ್ನುತ್ತಿದ್ದಾರೆ. ನ್ಯಾಯ ಎಲ್ಲರಿಗೂ ಒಂದೇ ಅನ್ನೋದಾದರೆ ನನ್ನ ವಿರುದ್ಧ ದೂರು ನೀಡಿದ ಮತ್ತು ತೆರವು ಮಾಡಬೇಕೆಂದು ಪಟ್ಟು ಹಿಡಿದ ರೈತರ ಒತ್ತುವರಿಗಳನ್ನು ತೆರವು ಗೊಳಿಸ ಬಾರದೇಕೆ ಎನ್ನುವ ಅಭಿಪ್ರಾಯವನ್ನು ಹೊಂದಿದ್ದಾರೆ.
ರೈತರಲ್ಲಿರುವ ಭಿನ್ನಾಭಿಪ್ರಾಯಗಳನ್ನು ತಾಲೂಕು ಆಡಳಿತ ಚೆನ್ನಾಗಿ ಬಳಸಿಕೊಂಡಿದೆ. ಈ ಹಿಂದೆ ಶ್ರೀಧರ್ ಮತ್ತು ಊರಿನವರ ನಡುವೆ ಅದೇ ಜಾಗದ ವಿಚಾರವಾಗಿ ಒಂದು ಮಾತುಕತೆಯಾಗಿದ್ದು, ಈ ಹಿಂದೆ 2017 ರಲ್ಲಿ ತೆರವುಗೊಳಿಸುವ ಆದೇಶವಾದ ಮೇಲೆ ಶ್ರೀಧರ ಎನ್ನುವವರಿಗೆ ಊರಿನವರು ಒಂದಷ್ಟು ಜಾಗ ಬಿಟ್ಟಿದ್ದು, ಅಷ್ಟಕ್ಕೆ ತೃಪ್ತರಾಗದೆ ಶ್ರೀಧರ್ ಮತ್ತಷ್ಟು ಜಾಗಕ್ಕೆ ಬೇಲಿ ಹಾಕುತ್ತಾ ಮುಂದುವರಿದಿದ್ದು, ಇದರಿಂದ ಊರಿನಲ್ಲಿ ಶ್ರೀಧರ್ ವಿರುದ್ಧ ಅಸಮಾಧಾನ ಗೊಂಡ ಜನರು ತಾಲೂಕು ತಹಸಿಲ್ದಾರ್ ಗೆ ಮನವಿ ನೀಡಿ ಆದೇಶವನ್ನು ಮಾಡಿಸಲಾಗಿದೆ. ಆ ಸಂದರ್ಭದಲ್ಲಿ ಆ ರೈತರಿಗೂ ಸಹ ತಹಸಿಲ್ದಾರ್ ಅವರು ಮುಂದಿನ ಪರಿಣಾಮಗಳ ಬಗ್ಗೆ ಮಾಹಿತಿ ನೀಡುವುದಾಗಿ ಮುಂದಾಗುವ ಅಪಾಯಗಳನ್ನು ತಿಳಿಹೇಳಿರುವುದಾಗಿ ತಿಳಿಸಿರುತ್ತಾರೆ. ಈ ರೀತಿ ರೈತರ ನಡುವಿನ ಕಚ್ಚಾಟಗಳು ಹೊಸನಗರ ತಾಲೂಕಿನಲ್ಲಿ ತೆರವುಗಳಿಗೆ ಕಾರಣವಾಗುತ್ತಿದೆ.
ಈ ಹಿಂದೆ ನಾಗರಕೊಡಿಗೆಯಲ್ಲಿ ಈರಗೋಡು ಶಂಕ್ರಪ್ಪ ಗೌಡ್ರು ರ ಅಡಿಕೆ ತೋಟ ಕಡಿದಾಗಲೂ ಇದೇ ರೀತಿಯ ಅನ್ಯಾಯ ಆಗಿತ್ತು. ಊರಿನ ಒಂದು ಗುಂಪು ಶಂಕ್ರಪ್ಪ ಗೌಡರ ವಿರುದ್ಧ ನ್ಯಾಯಾಲಯಕ್ಕೆ ಹೋಗಿ ತೋಟ ಕಡಿಯುವ ಆದೇಶ ತಂದಿದ್ದು, ತೋಟ ಕಡಿಯಲೇಬೇಕಾದ ಅನಿವಾರ್ಯತೆಯಲ್ಲಿ ಅರಣ್ಯ ಇಲಾಖೆ ನಾಲ್ಕು ಎಕರೆಅಡಿಕೆ ತೋಟವನ್ನು ಕಡಿದು ಹಾಕಿತ್ತು. ಎರಡು ಪ್ರಕರಣಗಳ ಹಿಂದೆ ರೈತರ ನಡುವೆ ಒಗ್ಗಟ್ಟಿಲ್ಲದೆ ಇರುವುದು ಮತ್ತು ಗುಂಪುಗಾರಿಕೆಯಿಂದಾಗಿ ಅನ್ಯಾಯವಾಗಿದೆ. ಇನ್ನು ಮುಂದಾದರೂ ರೈತರು ಎಚ್ಚೆತ್ತು ಊರೊಳಗಿನ ಸಮಸ್ಯೆಗಳನ್ನು ತಮ್ಮ ತಮ್ಮಲ್ಲೇ ಬಗೆಹರಿಸಿಕೊಳ್ಳುವುದು ಒಳ್ಳೆಯದು ಎನ್ನುವ ಪಾಠವನ್ನು ಕಲಿಯಬೇಕಾಗಿದೆ.